ಡೇರ್ ಡೆವಿಲ್ಸ್‌ಗೆ ರಾಜಸ್ಥಾನ ಸೆಡ್ಡು
ನವದೆಹಲಿ: ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಸೋಲನುಭವಿಸಿದ್ದ ಡೆಲ್ಲಿ ಡೇರ್‌ಡೆವಿಲ್ಸ್ ತಂಡಕ್ಕೆ ಶನಿವಾರ ರಾಜಸ್ಥಾನ್ ರಾಯಲ್ಸ್ ತಂಡ ಸೆಡ್ಡು ಹೊಡೆಯಲಿದೆ.
ಮೊದಲ ಪಂದ್ಯದಲ್ಲಿ ಡೆಲ್ಲಿ ತಂಡ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿರುವುದು ತಂಡಕ್ಕೆ ಚಿಂತೆಯಾಗಿದೆ. ನಾಯಕ ಜಯವರ್ಧನೆ ಹೊರತು ಪಡಿಸಿ ಉಳಿದ ಯಾವುದೇ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚುಕಾಲ ನಿಲ್ಲಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಪ್ರಮುಖ ಆಟಗಾರರಾದ ಡೇವಿಡ್ ವಾರ್ನರ್, ಉನ್ಮುಕ್ತ್ ಚಾಂದ್, ಜುನೇಜಾ ಹಾಗೂ ನಮನ್ ಓಜಾರಿಂದ ಉತ್ತಮ ಬ್ಯಾಟಿಂಗ್ ನಿರೀಕ್ಷಿಸುತ್ತಿದೆ.
ಇನ್ನೊಂದೆಡೆ ರಾಜಸ್ಥಾನ್ ತಂಡ ವ್ಯಾಟ್ಸನ್ ಅವರ ಅನುಪಸ್ಥಿತಿಯನ್ನು ಎದುರಿಸಲಿದೆಯಾದರೂ, ತಂಡದಲ್ಲಿ ಬ್ರಾಡ್ ಹಾಡ್ಜ್, ಅಂಜಿಕ್ಯ ರಹಾನೆ, ಓವೈಸ್ ಶಾ, ಅಶೋಕ್ ಮನೇರಿಯಾ, ಸ್ಯಾಮ್ಯೂಯೆಲ್ಸ್ ಬದ್ರಿ ರಂತಹ ಬ್ಯಾಟ್ಸ್‌ಮನ್‌ಗಳು ಆಧಾರವಾಗಲಿದ್ದರೆ, ಫಿಡಲ್ ಎಡ್ವರ್ಡ್ಸ್, ಶಾನ್ ಟೈಟ್, ಬ್ರಾಡ್ ಹಾಗ್ ಹಾಗೂ ಶ್ರೀಶಾಂತ್‌ರಂತಹ ವೇಗಿಗಳ ಜತೆಗೆ ಸ್ಟುವರ್ಟ್ ಬಿನ್ನಿ, ಕೆವಿನ್ ಕೂಪರ್‌ರಂತಹ ಆಲ್ರೌಂಡರ್‌ಗಳು ತಂಡದ ಬಲ ಹೆಚ್ಚಿಸಲಿದ್ದಾರೆ.