ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ದಕ್ಷಿಣ ಆಫ್ರಿಕೆಗೆಭಾರತ ಎ ತಂಡ

Mainashree
Updated On : 5 Apr 2013, 11:09 am

ಮುಂಬೈ: ಮುಂಬರುವ ಜೂನ್ ತಿಂಗಳಲ್ಲಿ ಭಾರತ 'ಎ' ತಂಡವು ದಕ್ಷಿಣ ಆಫ್ರಿಕಾ ಪ್ರವಾಸ ಮಾಡಲಿದೆ. ಆದರೆ ಯಾವ ಮಾದರಿಯ ಪಂದ್ಯಗಳು ಹಾಗೂ ಎಷ್ಟು ಪಂದ್ಯಗಳನ್ನಾಡಲಿದಗೆ ಎಂಬುದು ಇನ್ನು ನಿರ್ಧಾರವಾಗಿಲ್ಲ. ಭಾರತ ಎ ತಂಡದ ದಕ್ಷಿಣ ಆಫ್ರಿಕಾದ ಪ್ರವಾಸ ಜೂನ್‌ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಆದರೆ ಯಾವ ಪಂದ್ಯಗಳು ಯಾವ ದಿನಾಂಕದಲ್ಲಿ ಎಲ್ಲಿ ನಡೆಯಲಿದೆ ಎಂಬುದು ನಿರ್ಧಾರವಾಗಿಲ್ಲ. ಆದರೆ ಈ ಪ್ರವಾಸದಲ್ಲಿ ಭಾರತ ತಂಡ ಸೀಮಿತ ಓವರ್ ಹಾಗೂ ನಾಲ್ಕು ದಿನಗಳ ಪಂದ್ಯಗಳನ್ನಾಡಲಿದೆ ಎಂದು ಬಿಸಿಸಿಐನ ಕ್ರೀಡಾಭಿವೃದ್ಧಿಯ ಪ್ರಧಾನ ವ್ಯವಸ್ಥಾಪಕ ಪ್ರೊ.ರತ್ನಾಕರ್ ಶೆಟ್ಟಿ ತಿಳಿಸಿದ್ದಾರೆ. ಭಾರತ ಹಿರಿಯರ ತಂಡ ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳುತ್ತಿರುವ ಹಿನ್ನಲೆಯಲ್ಲಿ ಭಾರತ ಎ ತಂಡದ ಪ್ರವಾಸ ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement