ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸನ್‌ರೈಸರ್ಸ್ ಶುಭಾರಂಭ

Rashmi Kasaragodu
Updated On : 6 Apr 2013, 12:16 pm

ಹೈದರಾಬಾದ್: ಹಲವು ನಿರೀಕ್ಷೆ, ಕನಸುಗಳೊಂದಿಗೆ ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯವನ್ನಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ನಡೆದ ಪುಣೆ ವಾರಿಯರ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 22 ರನ್‌ಗಳ ಭರ್ಜರಿ ಜಯ ಸಾಧಿಸಿ, ಐಪಿಲ್‌ನಲ್ಲಿ ಶುಭಾರಂಭ ಮಾಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಸನ್‌ರೈಸರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತು.  ಈ ಮೊತ್ತ ಬೆನ್ನಟ್ಟಿದ ಪುಣೆ, 18.5 ಓವರ್‌ಗಳಲ್ಲಿ 104 ರನ್‌ಗಳಿಗೆ ಆಲೌಟ್ ಆಯಿತು.
ಸನ್ ರೈಸರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಕ್ಷತ್ ರೆಡ್ಡಿ ಹಾಗೂ ಪಾರ್ಥೀವ್ ಪಟೇಲ್ ತಂಡಕ್ಕೆ 34 ರನ್‌ಗಳ ಸಾಧಾರಣ ಆರಂಭ ನೀಡಿದರು. ಈ ವೇಳೆ ಪಾರ್ಥೀವ್ 19 ರನ್‌ಗಳಿಸಿ ದಿಂಡಾ ಎಸೆತದಲ್ಲಿ ಬೌಲ್ಡ್ ಆದರು.
ನಂತರ ಸಂಗಕ್ಕಾರ 15, ಅಕ್ಷತ್ 27, ಕೆಮರೂನ್ ವೈಟ್ 10, ವಿಹಾರಿ 11 ರನ್‌ಗಳಿಸಿದರು. ನಂತರ ಕೆಲ ಕಾಲ ಸ್ಪೋಟಕ ಬ್ಯಾಟಿಂಗ್ ನಡೆಸಿದ ತಿಸಾರ ಪೆರೇರಾ 17 ಎಸೆತದಲ್ಲಿ 30 ರನ್‌ಗಳಿಸಿದರು. ಅಂತಿಮವಾಗಿ ಆಶೀಶ್ ರೆಡ್ಡಿ ಅಜೇಯ 7 ಹಾಗೂ ರವಿತೇಜ ಅಜೇಯ 4 ರನ್ ಗಳಿಸಿದರು.
ಪುಣೆ ಪತನ: ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ಪರ, ಉತ್ತಪ್ಪ 24, ಪಾಂಡೆ 15, ಸ್ಯಾಮ್ಯುಯೆಲ್ಸ್ 5, ಯುವರಾಜ್ 2, ಟೇಲರ್ 19, ನಾಯರ್ 19, ಮಾರ್ಷ್ 7 ರನ್‌ಗಳಿಸಿದರು. ಒಂದು ಹಂತದಲ್ಲಿ 80 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದ ಪುಣೆ ನಂತರದ 24 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿತು. ನಿರಂತರ ಅಂತರದಲ್ಲಿ ತಮ್ಮ ಪ್ರಮುಖ ವಿಕೆಟ್ ಕಳೆದುಕೊಂಡ ಪುಣೆ ತಂಡ 22 ರನ್‌ಗಳ ಸೋಲನುಭವಿಸಿತು.
ಮಾರಕ ಬೌಲಿಂಗ್ ದಾಳಿ: ಸನ್‌ರೈಸರ್ಸ್ ತಂಡದ ಪರ ಪೆರೇರಾ, ಪುಣೆ ತಂಡದ ಮೊದಲ ವಿಕೆಟ್ ಪಡೆದು ಉತ್ತಮ ಆರಂಭ ನೀಡಿದರು. ನಂತರ ಪುಣೆಯ ಮೂವರು ಬ್ಯಾಟ್ಸ್‌ಮನ್‌ಗಳ ವಿಕೆಟ್ ಪಡೆದ ಅಮಿತ್ ಮಿಶ್ರಾ ಗೆಲುವು ಸುಲಭವಾಗಿಸಿದರು.
'ಸ್ಟನ್ನಿಂಗ್‌'   ಸ್ಟೇಯ್ನ್: 19ನೇ ಓವರ್‌ನಲ್ಲಿ ಸ್ಟೇಯ್ನ್ ಕೇವಲ 1 ರನ್ ನೀಡಿ 3 ವಿಕೆಟ್ ಪಡೆದು ತಂಡಕ್ಕೆ ಗೆಲುವು ತಂದುಕೊಟ್ಟರು.


ಸ್ಕೋರ್ ಬೋರ್ಡ್



ಸನ್‌ರೈಸರ್ಸ್ ಹೈದರಾಬಾದ್: 126/6 (20 ಓವರ್)
ಅಕ್ಷತ್ ರೆಡ್ಡಿ ಬಿ ಯುವರಾಜ್ ಸಿಂಗ್ 27 (30), ಪಾರ್ಥೀವ್ ಪಟೇಲ್ ಬಿ ದಿಂಡಾ 19 (18), ಕುಮಾರ ಸಂಗಕ್ಕಾರ ಬಿ ಇಶಾಂತ್ ಶರ್ಮಾ 15 (16), ಕೆಮೆರೂನ್ ವೈಟ್ ಸಿ ಮಾರ್ಷ್ ಬಿ ಸ್ಯಾಮ್ಯುಯೆಲ್ಸ್ 10 (18), ತಿಸಾರಾ ಪೆರೇರಾ ಸಿ ಪಾಂಡೆ ಬಿ ದಿಂಡಾ 30 (18), ಹನುಮ ವಿಹಾರಿ ಸಿ ದಿಂಡಾ ಬಿ ಭುವನೇಶ್ವರ್ 11 (12), ಆಶೀಶ್ ರೆಡ್ಡಿ ಅಜೇಯ 7 (4), ರವಿತೇಜಾ ಅಜೇಯ 4 (4), ಇತರೆ 3.
ವಿಕೆಟ್ ಪತನ: 1-34, 2-60, 3-72, 4-83, 5-109, 6-116.
ಬೌಲಿಂಗ್: ಸ್ಯಾಮ್ಯುಯೆಲ್ಸ್ 4-0-34-1, ಭುವನೇಶ್ವರ್ ಕುಮಾರ್ 4-0-17-1, ಅಶೋಕ್ ದಿಂಡಾ 4-0-29-2, ಆಂಗೆಲೋ ಮ್ಯಾಥ್ಯೂಸ್ 2-0-16-0, ರಾಹುಲ್ ಶರ್ಮಾ 4-0-21-1, ಯುವರಾಜ್ ಸಿಂಗ್ 2-0-8-1.



ಪುಣೆ ವಾರಿಯರ್ಸ್: 104 (18.5 ಓವರ್)
ಉತ್ತಪ್ಪ ಸಿ ಪಾರ್ಥೀವ್ ಬಿ ಪೆರೇರಾ 24 (30), ಮನೀಶ್ ಸಿ ವೈಟ್ ಬಿ ಅಮಿತ್ ಮಿಶ್ರಾ 15 (53), ಸ್ಯಾಮ್ಯುಯೆಲ್ಸ್ ಸಿ ವೈಟ್ ಬಿ ಪೆರೇರಾ 5 (6), ಯುವಿ ಸ್ಟಂಪ್ಡ್ ಪಾರ್ಥೀವ್ ಬಿ ಅಮಿತ್ ಮಿಶ್ರಾ 2 (8), ರಾಸ್ ಟೇಲರ್ ಬಿ ಆಶೀಶ್ ರೆಡ್ಡಿ 19 (22), ಅಭಿಶೇಕ್ ಸಿ ಶರ್ಮಾ ಬಿ ಮಿಶ್ರಾ 19 (22), ಮ್ಯಾಥ್ಯೂಸ್ ಅಜೇಯ 8 (22), ಮಿಚೆಲ್ ಮಾರ್ಷ್ ರನೌಟ್ (ಪೆರೇರಾ) 7 (4), ಭುವನೇಶ್ವರ್ ಬಿ ಸ್ಟೇಯ್ನ್ 3 (7), ರಾಹುಲ್ ಶರ್ಮಾ ಬಿ ಸ್ಟೇಯ್ನ್ 0 (1), ದಿಂಡಾ ಸಿ ವೈಟ್ ಬಿ ಸ್ಟೇಯ್ನ್ 0 (1). ಇತರೆ 2.
ವಿಕೆಟ್ ಪತನ: 1-36, 2-42, 3-47, 4-50, 5-83, 6-86, 7-94, 8-104, 9-104, 10-104.
ಬೌಲಿಂಗ್: ಸ್ಟೇಯ್ನ್ 3.5-0-11-3, ಇಶಾಂತ್ 4-0-22-0, ತಿಸಾರಾ ಪೆರೇರಾ 4-0-29-2, ಅಮಿತ್ ಮಿಶ್ರಾ 4-0-19-3, ಕೆಮೆರೂನ್ ವೈಟ್ 1-0-2-0, ಅಭಿಶೇಕ್ ರೆಡ್ಡಿ 2-0-21-1.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement