ಸನ್‌ರೈಸರ್ಸ್ ಸಾಧಾರಣ ಮೊತ್ತ
ಹೈದರಾಬಾದ್: ಹಲವು ನಿರೀಕ್ಷೆ, ಕನಸುಗಳೊಂದಿಗೆ ಐಪಿಎಲ್‌ಗೆ ಕಾಲಿಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಶುಕ್ರವಾರ ಪುಣೆ ವಾರಿಯರ್ಸ್ ವಿರುದ್ಧದ ತನ್ನ ಚೊಚ್ಚಲ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿ ಸಾಧಾರಣ ಮೊತ್ತ ಪೇರಿಸಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಸನ್‌ರೈಸರ್ಸ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 126 ರನ್ ಕಲೆಹಾಕಿತು.
ಪತ್ರಿಕೆ ಮುದ್ರಣಕ್ಕೆ ಹೋಗುವ ಮುನ್ನ ಪುಣೆ ತಂಡದ ಇನಿಂಗ್ಸ್ ಆರಂಭವಾಗಿರಲಿಲ್ಲ.
ಸನ್ ರೈಸರ್ಸ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಕ್ಷತ್ ರೆಡ್ಡಿ ಹಾಗೂ ಪಾರ್ಥೀವ್ ಪಟೇಲ್ ಮೊದಲ ವಿಕೆಟ್‌ಗೆ 34 ರನ್ ಪೇರಿಸಿ ಸಾಧಾರಣ ಆರಂಭ ನೀಡಿದರು. ನಂತರ ಸಂಗಕ್ಕಾರ (15), ಅಕ್ಷತ್ (27), ಕ್ಯಾಮರೂನ್ ವೈಟ್ (10), ವಿಹಾರಿ (11) ಅವರ ವೈಫಲ್ಯದಿಂದ ತಂಡ ಹೆಚ್ಚು ಮೊತ್ತ ಪೇರಿಸಲಾಗಲಿಲ್ಲ. ನಂತರ ಕೆಲ ಕಾಲ ಸ್ಪೋಟಕ ಬ್ಯಾಟಿಂಗ್ ನಡೆಸಿದ ತಿಸಾರ ಪೆರೇರಾ 17 ಎಸೆತದಲ್ಲಿ 30 ರನ್ ಗಳಿಸಿ ತಂಡದ ಮೊತ್ತ ಏರಿಸಲು ಶ್ರಮಿಸಿದರಾದರೂ, ಅಂತಿಮವಾಗಿ ಸನ್‌ರೈಸರ್ಸ್ ಕೇವಲ 126 ರನ್ ಮಾತ್ರ ಗಳಿಸಲು ಶಕ್ತವಾಯಿತು.
ಸ್ಕೋರ್ ಬೋರ್ಡ್ (ಅಪೂರ್ಣ)
ಸನ್‌ರೈಸರ್ಸ್ ಹೈದರಾಬಾದ್: 126/6 (20 ಓವರ್)
ಅಕ್ಷತ್ ರೆಡ್ಡಿ ಬಿ ಯುವರಾಜ್ ಸಿಂಗ್ 27 (30), ಪಾರ್ಥೀವ್ ಪಟೇಲ್ ಬಿ ದಿಂಡಾ 19 (18), ಕುಮಾರ ಸಂಗಕ್ಕಾರ ಬಿ ಇಶಾಂತ್ ಶರ್ಮಾ 15 (16), ಕೆಮೆರೂನ್ ವೈಟ್ ಸಿ ಮಾರ್ಷ್ ಬಿ ಸ್ಯಾಮ್ಯುಯೆಲ್ಸ್ 10 (18), ತಿಸಾರಾ ಪೆರೇರಾ ಸಿ ಪಾಂಡೆ ಬಿ ದಿಂಡಾ 30 (18), ಹನುಮ ವಿಹಾರಿ ಸಿ ದಿಂಡಾ ಬಿ ಭುವನೇಶ್ವರ್ 11 (12), ಆಶೀಶ್ ರೆಡ್ಡಿ ಅಜೇಯ 7 (4), ರವಿತೇಜಾ ಅಜೇಯ 4 (4), ಇತರೆ 3.
ವಿಕೆಟ್ ಪತನ: 1-34, 2-60, 3-72, 4-83, 5-109, 6-116.
ಬೌಲಿಂಗ್: ಸ್ಯಾಮ್ಯುಯೆಲ್ಸ್ 4-0-34-1, ಭುವನೇಶ್ವರ್ ಕುಮಾರ್ 4-0-17-1, ಅಶೋಕ್ ದಿಂಡಾ 4-0-29-2, ಆಂಗೆಲೋ ಮ್ಯಾಥ್ಯೂಸ್ 2-0-16-0, ರಾಹುಲ್ ಶರ್ಮಾ 4-0-21-1, ಯುವರಾಜ್ ಸಿಂಗ್ 2-0-8-1.