ಐ- ಲೀಗ್: ಟೈಗರ್ಸ್ಗೆ ಸೋಲು
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಐ ಲೀಗ್ 2ನೇ ಡಿವಿಷನ್ನ ಅಂತಿಮ ಸುತ್ತಿನ ಮೊದಲನೇ ಹಂತದ ಶನಿವಾರದ ಪಂದ್ಯದಲ್ಲಿ ರಂಗದಾಜೀದ್ ತಂಡವು ಮುಂಬೈ ಟೈಗರ್ಸ್ ವಿರುದ್ಧ 3-1 ಅಂತರದ ಜಯ ಸಾಧಿಸಿದೆ. ರಂಗದಾಜೀದ್ ತಂಡದ ಪರ ಬನ್ಷಾ ರೈ (44ನೇ ನಿಮಿಷ), ಅಬೋಚ ಸಿಂಗ್ (53) ಶಿಂಹೋಜುನ್ (81) ಗೋಲು ದಾಖಲಿಸಿದರೆ, ಮುಂಬೈ ಟೈಗರ್ಸ್ ತಂಡದ ಪರ ಪ್ರದೀಪ್ 2ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಭಾನುವಾರ ಟೂರ್ನಿಯ ವಿಶ್ರಾಂತಿಯ ದಿನವಾಗಿದೆ.