ಧೋನಿ ಪಡೆಗೆ ಸವಾಲಿನ ಮೊತ್ತ ನೀಡಿದ ಮುಂಬೈ
ಚೆನ್ನೈ: ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಶನಿವಾರ ನಡೆದ ಐಪಿಎಲ್ ಮೊದಲು ಬ್ಯಾಟ್ ಮಾಡಿದ ಮುಂಬೈ, ಧೋನಿ ಪಡೆ ವಿರುದ್ಧ ಸವಾಲಿನ ಮೊತ್ತ ಪೇರಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ಗಳಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಸಚಿನ್ ಹಾಗೂ ರಿಕಿ ಪಾಂಟಿಂಗ್ ಕೇವಲ 3 ರನ್ ಪೇರಿಸಿದರು. ಈ ವೇಳೆ ಮೊದಲ ಎಸೆತದಲ್ಲಿ ಬೊಲಿಂಜರ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದ ಸಚಿನ್ ಮುಂಬೈ ಕುಸಿತಕ್ಕೆ ನಾಂದಿಯಾಡಿದರು. ಸಚಿನ್ ನಂತರ ಪಾಂಟಿಂಗ್ 6, ಕಾರ್ತಿಕ್ 37, ಶರ್ಮಾ 8, ರಾಯುಡು 7, ಸ್ಮಿತ್ 3 ರನ್ಗಳಿಸಿ ಔಟಾದರು. ಈ ವೇಳೆ ಜತೆಯಾದ ಪೊಲಾರ್ಡ್ ಹಾಗೂ ಹರ್ಭಜನ್ ಸಿಂಗ್ 7ನೇ ವಿಕೆಟ್ಗೆ ತಂಡಕ್ಕೆ 65 ರನ್ಗಳ ಜತೆಯಾಟ ನೀಡಿ ಆಧಾರವಾದರು.
ಪೊಲಾರ್ಡ್ ಅಜೇಯ 57 ರನ್ಗಳಿಸಿದರೆ, ಹರ್ಭಜನ್ ಅಜೇಯ 21 ರನ್ಗಳಿಸಿ ತಂಡ ಸವಾಲಿನ ಮೊತ್ತ ಪೇರಿಸಲು ಕಾರಣರಾದರು.
ಸ್ಕೋರ್ ಬೋರ್ಡ್
ಮುಂಬೈ ಇಂಡಿಯನ್ಸ್ 148/6 (20 ಓವರ್)
ಪಾಂಟಿಂಗ್ ಸಿ ಅಶ್ವಿನ್ ಬಿ ರಜ್ಪೂತ್ 6 (10), ಸಚಿನ್ ಎಲ್ಬಿಡಬ್ಲೂ ಬಿ ನ್ಯಾನಿಸ್ 0 (1), ಕಾರ್ತಿಕ್ ಎಲ್ಬಿಡಬ್ಲೂ ಬಿ ಬ್ರಾವೊ 37 (25), ಶರ್ಮಾ ಸಿ ಧೋನಿ ಬಿ ಬ್ರಾವೊ 8 (10), ರಾಯುಡು ಸಿ ನ್ಯಾನಿಸ್ ಬಿ ಲಾಗ್ಲಿನ್ 7 (10), ಪೊಲಾರ್ಡ್ ಅಜೇಯ 57 (38), ಸ್ಮಿತ್ ಸಿ ಬ್ರಾವೊ ಬಿ ಅಶ್ವಿನ್ 3 (5), ಹರ್ಭಜನ್ ಅಜೇಯ 21 (21).
ಇತರೆ 9.
ಬೌಲಿಂಗ್: ನ್ಯಾನಿಸ್ 4-0-18-1, ರಜ್ಪೂತ್ 3-0-25-1, ಬ್ರಾವೊ 4-0-44-2, ಲಾಗ್ಲಿನ್ 3-0-25-1, ಜಡೇಜಾ 2-0-12-0, ಅಶ್ವಿನ್ 4-0-21-1