ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರೈಸರ್ಸ್ ಪ್ರದರ್ಶನ ಮೆಚ್ಚಿದ ಸ್ಟೇಯ್ನ್

Mainashree
Updated On : 6 Apr 2013, 11:32 am

ಹೈದರಾಬಾದ್: ಐಪಿಎಲ್‌ನಲ್ಲಿ ಹೊಸ ತಂಡವೆಂಬ ಹಣೆಪಟ್ಟಿಯೊಂದಿಗೆ ಕಾಲಿಟ್ಟಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ, ಪುಣೆ ವಾರಿಯರ್ಸ್ ವಿರುದ್ಧ ಆಡಿದ ತನ್ನ ಮೊದಲ ಪಂದ್ಯದಲ್ಲಿ ನುರಿತ ತಂಡ ಆಡುವ ರೀತಿಯಲ್ಲಿ ಆಡಿತು ಎಂದು ಸನ್‌ರೈಸರ್ಸ್ ತಂಡದ ವೇಗಿ ಸ್ಟೇಯ್ನ್ ಹೇಳಿದ್ದಾರೆ. ತಮ್ಮ ತಂಡದ ಪ್ರದರ್ಶನದ ಕುರಿತಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡು ಕೇವಲ 126 ರನ್‌ಗಳ ಸವಾಲನ್ನು ಎದುರಾಳಿ ತಂಡಕ್ಕೆ ಸನ್‌ರೈಸರ್ಸ್ ತಂಡ ನೀಡಿತ್ತು. ಆದರೂ, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಮಿಂಚಿದ ತಂಡ, ಉತ್ತಮ ಪ್ರದರ್ಶನ ನೀಡಿ ಪಂದ್ಯದಲ್ಲಿ 22 ರನ್‌ಗಳ ಜಯ ಸಾಧಿಸಿತು. ಹೊಸ ತಂಡವೆಂಬುದನ್ನು ಪಕ್ಕಕ್ಕಿಟ್ಟು ನೋಡಿದರೆ, ತಂಡದ ಒಟ್ಟಾರೆ ಪ್ರದರ್ಶನ ಯಾವುದೇ ನುರಿತ ತಂಡಕ್ಕಿಂತ ಕಡಿಮೆಯೇನಿರಲಿಲ್ಲ ಎಂದು ಸ್ಟೇಯ್ನ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement