'ಪರಿಸ್ಥಿತಿಗೆ ತಕ್ಕ ತಂಡದ ಆಯ್ಕೆ'
ಚೆನ್ನೈ: ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೊನೆ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡ ರೋಚಕ ಜಯ ಸಾಧಿಸಿದ್ದು, ಈ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ತಂಡದ ಆಡಳಿತ ಮಂಡಳಿ ಆಡುವ ತಂಡವನ್ನು ಆಯ್ಕೆ ಮಾಡಿತು ಎಂದು ಪೊಲಾರ್ಡ್ ತಿಳಿಸಿದ್ದಾರೆ.
ಈ ಪಂದ್ಯದ ಪರಿಸ್ಥಿತಿಗೆ ತಕ್ಕಂತೆ ತಂಡವನ್ನು ಆಡಳಿತ ಮಂಡಳಿ ಆಯ್ಕೆ ಮಾಡಿತು. ತಂಡದ ಆಟಗಾರನಾಗಿ ನನ್ನ ಮೇಲೆ ಜವಾಬ್ದಾರಿ ನೀಡಲಾಯಿತು. ಹಾಗಾಗಿ ಸಿಕ್ಕ ಅವಕಾಶವನ್ನು ನಾನು ಧನಾತ್ಮಕವಾಗಿ ಸ್ವೀಕರಿಸಿದೆ. ಆಟಗಾರನಿಗೆ ಬಂದ ಸವಾಲನ್ನು ಸ್ವೀಕರಿಸಿ ಅದನ್ನು ಸಮರ್ಥವಾಗಿ ನಿಭಾಯಿಸಬೇಕು. ಆಗಲೇ ಆಟಗಾರ ಯಶಸ್ಸು ಸಾಧಿಸಲು
ಸಾಧ್ಯ ಎಂದು ಹೇಳಿದರು. ಶೂಟಿಂಗ್: ಹೀನಾ ಹೋರಾಟ ಅಂತ್ಯ
ನವದೆಹಲಿ: ಅರ್ಹತಾ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಹೀನಾ ಸಿಧು, ಕೊರಿಯಾದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.
10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಹೀನಾ, ಉತ್ತಮ ಪ್ರದರ್ಶನದಿಂದ ಎರಡನೇ ಸ್ಥಾನಗಳಿಸುವ ಮೂಲಕ ಅಂತಿಮ ಸುತ್ತಿಗೆ ಪ್ರವೇಶ ಪಡೆದಿದ್ದರು. ಅಂತಿಮ ಸುತ್ತಿನಲ್ಲಿ ತಮ್ಮ ಉತ್ತಮ ಪ್ರದರ್ಶನ ಮುಂದುವರಿಸಲು ವಿಫಲರಾದ ಹೀನಾ ಏಂಟು ಆಟಗಾರರಲ್ಲಿ ಅಂತಿಮ ಸ್ಥಾನ ಪಡೆಯುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಅರ್ಹತಾ ಸುತ್ತಿನಲ್ಲಿ 388 ಪಾಯಿಂಟ್‌ಗಳನ್ನು ಪಡೆದಿದ್ದ ಹೀನಾ, ಅಂತಿಮ ಸುತ್ತಿನಲ್ಲಿ ಕೇವಲ 75.7 ಅಂಕಗಳನ್ನಷ್ಟೇ ಗಳಿಸಲು ಶಕ್ತರಾದರು.
ಭಾರತದ ಅನ್ನು ರಾಜ್ ಹಾಗೂ ರುಚಿತಾ ವಿನೇರ್ಕರ್ ಕ್ರಮವಾಗಿ 14 ಹಾಗೂ 27ನೇ ಸ್ಥಾನ ಪಡೆಯುವ ಮೂಲಕ ಅಹರ್ತಾ ಸುತ್ತಿನಲ್ಲೇ ಹೊರಗುಳಿದಿದ್ದರು.