ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೈನಲ್‌ಗೆ ಒಡಿಶಾ- ಜಾರ್ಖಂಡ್

Mainashree
Updated On : 8 Apr 2013, 12:13 pm

ನಾಗೋನ್ (ಅಸ್ಸಾಂ): ಆಕ್ರಮಣಕಾರಿ ದಾಳಿ ನಡೆಸುವ ಮೂಲಕ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮಣಿಪುರ ತಂಡವನ್ನು 8-1 ಅಂತರದಿಂದ ಪರಾಭವಗೊಳಿಸಿದ ಒಡಿಶಾ, ಹಾಕಿ ಇಂಡಿಯಾದ ಈಶಾನ್ಯ ವಲಯದ ಸಬ್ ಜೂನಿಯರ್ ಬಾಲಕರ ಹಾಕಿ ಪಂದ್ಯಾವಳಿಯ ಫೈನಲ್ ಪ್ರವೇಶಿಸಿತು. ಫೈನಲ್‌ನಲ್ಲಿ ಒಡಿಶಾ ತಂಡ ಜಾರ್ಖಂಡ್ ವಿರುದ್ಧ ಹೋರಾಡಲಿದೆ. ಒಡಿಶಾ ಪರ ಪಂದ್ಯದ 8, 19, 48 ಹಾಗೂ 52ನೇ ನಿಮಿಷದಲ್ಲಿ ಅಮಿತ್ ಚಿರ್ಮಾಕೋ ಗೋಲು ದಾಖಲಿಸಿದರು. ಇನ್ನು 33 ಮತ್ತು 69ನೇ ನಿಮಿಷದಲ್ಲಿ ಅಶ್ವಿನ್ ಕುಜುರ್, 65ನೇ ನಿಮಿಷದಲ್ಲಿ ಸುಮನ್ ಬೆಕ್ ಹಾಗೂ 66ನೇ ನಿಮಿಷದಲ್ಲಿ ಸೂರಜ್ ಮಿಂಜ್ ಗೋಲು ದಾಖಲಿಸಿದರು. ಅಚ್ಚುಕಟ್ಟಾದ ಆಟ ಪ್ರದರ್ಶಿಸಿದ ಒಡಿಶಾ ವಿರುದ್ಧ ಮಣಿಪುರ ತಂಡ ಹಲವಾರು ತಪ್ಪುಗಳನ್ನು ಎಸಗಿದ್ದು, ತಂಡ ಕೈಚೆಲ್ಲಲು ಕಾರಣವಾಯಿತು. ಬಾಲಕಿಯರ ಫೈನಲ್ ಪಂದ್ಯದಲ್ಲೂ ಜಾರ್ಖಂಡ್ ತಂಡ ಒಡಿಶಾ ಹಣಾಹಣಿ ನಡೆಸಲಿದ್ದು, ಬಾಲಕ ಮತ್ತು ಬಾಲಕಿಯರ ಫೈನಲ್ ಪಂದ್ಯಗಳು ಸೋಮವಾರ ನಡೆಯಲಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement