ಮೊಕದ್ದಮೆ ವಜಾಕ್ಕೆ ಮನವಿ
ಆಸ್ಟಿನ್ (ಟೆಕ್ಸಾಸ್): ಡೋಪಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸೈಕ್ಲಿಸ್ಟ್ ಲ್ಯಾನ್ಸ್ ಆರ್ಮ್ಸ್ಟ್ರಾಂಗ್, ತಮ್ಮ ವಿರುದ್ಧ ಡಲ್ಲಾಸ್ ಪ್ರಮೋಷನ್ಸ್ ಕಂಪನಿ ಹೂಡಿರುವ ಮೊಕದ್ದಮೆಯನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ. ಕಂಪನಿ ಆರ್ಮ್ಸ್ಟ್ರಾಂಗ್ಗೆ ತಾನು ನೀಡಿದ್ದ ರು. 1.2 ಕೋಟಿಗೂ ಅಧಿಕ ಹಣವನ್ನು ವಾಪಸ್ ನೀಡುವಂತೆ ಮೊಕದ್ದಮೆಯನ್ನು ಹೂಡಿದೆ. ಪ್ರತಿಷ್ಠಿತ ಟೂರ್ ದಿ ಫ್ರಾನ್ಸ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಗೆದ್ದ ಹಿನ್ನೆಲೆಯಲ್ಲಿ ಕಂಪನಿ ಆರ್ಮಸ್ಟ್ರಾಂಗ್ ಅವರಿಗೆ ಇಷ್ಟು ಹಣವನ್ನು ನೀಡಿತ್ತು. ಟೂರ್ ದಿ ಫ್ರಾನ್ಸ್ ಗೆಲ್ಲಲು ಆರ್ಮಸ್ಟ್ರಾಂಗ್ ಡ್ರಗ್ ಸೇವಿಸಿ ವಂಚನೆ ಮಾಡಿದ್ದಾರೆ. ಹೀಗಾಗಿ ನಮ್ಮ ಹಣವನ್ನು ವಾಪಸ್ ನೀಡಬೇಕು ಎಂದು ದಲ್ಲಾಸ್ನಲ್ಲಿ ಜಿಲ್ಲಾ ನ್ಯಾಯಾಲಯದಲ್ಲಿ ಫೆಬ್ರುವರಿಯಲ್ಲಿ ಕಂಪನಿ ದಾವೆಯನ್ನು ಹೂಡಿದೆ.