ಪದತ್ಯಾಗಕ್ಕೆ ಕೇಂದ್ರ ಸೂಚನೆ
ನವದೆಹಲಿ: ವಯೋವುತಿ ಮೀರಿದ್ದರೂ ಭಾರತೀಯ ಪ್ಯಾರಾಲಿಂಪಿಕ್ಸ್ ಸಂಸ್ಥೆಯ ಹುದ್ದೆಯಲ್ಲಿ ಮುಂದವರಿದಿರುವ ರತನ್ ಸಿಂಗ್ ಅವರನ್ನು ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಕೇಂದ್ರ ಕ್ರೀಡಾ ಇಲಾಖೆ ಸೂಚಿಸಿದೆ.
ಈ ಬಗ್ಗೆ ರತನ್ ಸಿಂಗ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಕ್ರೀಡಾ ಇಲಾಖೆ, ರಾಷ್ಟ್ರೀಯ ಕ್ರೀಡಾ ನೀತಿಯನ್ವಯ ಪದಾಧಿಕಾರಿಗಳ ಹುದ್ದೆಗೆ ವಯೋವುತಿಯನ್ನು ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ, 70 ವಯಸ್ಸು ದಾಟಿರುವ ಯಾವುದೇ ವ್ಯಕ್ತಿಯು ರಾಷ್ಟ್ರದಲ್ಲಿನ ಯಾವುದೇ ಕ್ರೀಡಾಸಂಸ್ಥೆಗಳ ಪದಾಧಿಕಾರಿಗಳ ಹುದ್ದೆಯಲ್ಲಿ ಮುಂದುವರಿಯುವ ಹಾಗಿಲ್ಲ ಎಂದು ಹೇಳಿದೆ.