ಭಾರತ-ಆಸೀಸ್ ಸರಣಿಗೆ ಹೆಚ್ಚು ಟಿಆರ್ಪಿ
ನವದೆಹಲಿ: ಕಳೆದ ನಾಲ್ಕು ವರ್ಷದಲ್ಲಿ ಭಾರತ ತಂಡ ಆಡಿದ ಟೆಸ್ಟ್ ಸರಣಿಗಳಲ್ಲಿ ಮಾರ್ಚ್ನಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿ ಅತಿ ಹೆಚ್ಚು ಟಿಆರ್ಪಿ ಪಡೆದಿದೆ. ಈ ಬಾರಿಯ ಸರಣಿಯಲ್ಲಿ ಇಎಸ್ಪಿಎನ್ ಸ್ಟಾರ್ಸ್ಪೋರ್ಟ್ಸ್ ಕಂಪನಿಯು ಪ್ರೇಕ್ಷಕರಿಗೆ ಅನುಕೂಲವಾಗುವ ಉದ್ದೇಶದಿಂದ ಹಿಂದಿ ಭಾಷೆಯಲ್ಲೂ ವಿಕ್ಷಕ ವಿವರಣೆಯನ್ನು ನೀಡಲಾಗಿತ್ತು. ಈ ಪ್ರಯೋಗದಿಂದ ಹೆಚ್ಚು ಪ್ರೇಕ್ಷಕರು ಸರಣಿ ವೀಕ್ಷಿಸಿದ್ದು, ಶೇ.40 ರಷ್ಟು ಹೆಚ್ಚಿನ ರೇಟಿಂಗ್ಸ್ ಪಡೆದಿದ್ದು, 2.05 ರಷ್ಟು ಟಿಆರ್ಪಿ ಪಡೆದಿದೆ. ಈ ಸರಣಿಯನ್ನು ಸುಮಾರು 9.28 ಕೋಟಿ ಜನ ವೀಕ್ಷಿಸಿದ್ದಾರೆ. 2011/12ನೇ ಸಾಲಿನ ಭಾರತ-ಆಸೀಸ್ ಟೆಸ್ಟ್ ಸರಣಿ 1.37 ಟಿಆರ್ಪಿ ಪಡೆದಿದ್ದು, ಈ ಬಾರಿಯ ಸರಣಿ ಶೇ.50 ರಷ್ಟು ರೇಟಿಂಗ್ಸ್ ಪಡೆದಿದೆ.