ಮುಂಬೈ ಮಣಿಸಿದ ಭವಾನಿಪೋರ್
ಬೆಂಗಳೂರು: ರಾಜ್ಯ ಫುಟ್ಬಾಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ನ ಅಂತಿಮ ಸುತ್ತಿನ ಮೊದಲ ಹಂತದ ಸೋಮವಾರದ ಮೊದಲ ಪಂದ್ಯದಲ್ಲಿ ಭವಾನಿಪೋರ್ ತಂಡ ಮುಂಬೈ ಟೈಗರ್ಸ್ ವಿರುದ್ಧ 3-2 ಗೋಲುಗಳ ಅಂತರದಿಂದ ಜಯ ಸಾಧಿಸಿತು.
ಪಂದ್ಯದ 26 ಮತ್ತು 64ನೇ ನಿಮಿಷದಲ್ಲಿ ಬಾರ್ರೆಟೋ ಭವಾನಿಪೋರ್ ಪರ ಗೋಲು ದಾಖಲಿಸಿದರೆ, 84ನೇ ನಿಮಿಷದಲ್ಲಿ ಪೆನ್ ಗೋಲು ದಾಖಲಿಸಿದರು. ಮುಂಬೈ ಪರ ದೆಂಬಾ ದಿಖ್ತೆ ಪಂದ್ಯದ 7ನೇ ನಿಮಿಷದಲ್ಲಿ ಮತ್ತು ಪ್ರದೀಪ್ ಎನ್.ಪಿ 62ನೇ ನಿಮಿಷದಲ್ಲಿ ಗೋಲುದಾಖಲಿಸಿದರು. ದಿನದ ಎರಡನೇ ಪಂದ್ಯದಲ್ಲಿ ಮೊಹ್ಮದಿಯನ್ ಸ್ಪೋರ್ಟಿಂಗ್ ತಂಡ ರಂಗದ್ಜೀದ್ ವಿರುದ್ಧ 1-0 ಅಂತರದಿಂದ ಗೋಲು ದಾಖಲಿಸಿತು. ಜೆರ್ರಿ ಜಿರ್ಸಿಂಗ್ ಪಂದ್ಯದ 50ನೇ ನಿಮಿಷದಲ್ಲಿ ಮೊಹ್ಮದಿಯನ್ ಸ್ಪೋರ್ಟಿಂಗ್ ತಂಡದ ಪರ ಗೋಲು ದಾಖಲಿಸಿದರು.