ಹಾಕಿ ಅಭಿವೃದ್ಧಿಗೆ ಸಮಿತಿ ರಚನೆ
ನವದೆಹಲಿ: ಭಾರತದಲ್ಲಿ ಬುಡಮಟ್ಟದಲ್ಲಿ ಹಾಕಿ ಕ್ರೀಡೆಯ ಅಭಿವೃದ್ಧಿ ಪಡಿಸಲು ಹಾಕಿ ಇಂಡಿಯಾ ಚಿಂತನೆ ನಡೆಸುತ್ತಿದ್ದು, 2013-14ನೇ ಸಾಲಿನಲ್ಲಿನ ಕ್ರೀಡೆಯ ಉನ್ನತ ಪ್ರದರ್ಶನ ಹಾಗೂ ಅಭಿವೃದ್ಧಿ ಸಮಿತಿಯನ್ನು ರಚಿಸಿದೆ. ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಾತ್ರಾ ನೇತೃತ್ವದಲ್ಲಿ ಈ ಸಮಿತಿಯನ್ನು ಸೋಮವಾರ ಆಯ್ಕೆ ಮಾಡಲಾಗಿದೆ. ಈ ಸಮಿತಿಯು15 ಸದಸ್ಯರನ್ನು ಒಳಗೊಂಡಿದ್ದು, ಇದರಲ್ಲಿ ಒಲಿಂಪಿಯನ್ನರು, ಅಂತಾರಾಷ್ಟ್ರೀಯ ಆಟಗಾರರು, ಮುಖ್ಯ ತರಬೇತುದಾರರು ಹಾಗೂ ಸಾಯ್ ಆಹ್ವಾನಿತ ಸದಸ್ಯರು ಈ ಸಮಿತಿಯಲ್ಲಿದ್ದಾರೆ.