ಹಾಲಿ ಚಾಂಪಿಯನ್ಸ್ ನೈಟ್ ರೈಡರ್ಸ್ಗೆ ಪರಾಭವ
ಜೈಪುರ: ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಕೆಕೆಆರ್ ತಂಡ 19 ರನ್ಗಳ ಸೋಲು ಕಂಡಿದೆ.
ಈ ಬಾರಿಯ ಐಪಿಎಲ್ನಲ್ಲಿ ತನ್ನ ಆರಂಭಿಕ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಕೆಕೆಆರ್ಗೆ ರಾಜಸ್ಥಾನ ಸೋಲಿನ ರುಚಿ ತೋರಿಸಿತು.
ಟಾಸ್ ಗೆದ್ದಿದ್ದ ಕೆಕೆಆರ್, ಮೊದಲು ಬ್ಯಾಟ್ ಮಾಡಲು ನಿರ್ಧರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಶೇನ್ ವ್ಯಾಟ್ಸನ್ ಹಾಗೂ ಅಜಿಂಕ್ಯ ರಹಾನೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿ ಕೊಡುವಲ್ಲಿ ವಿಫಲರಾದರು. 10 ಎಸೆತಗಳನ್ನು ಎದುರಿಸಿದ ವ್ಯಾಟ್ಸನ್ ಕೇವಲ 5 ರನ್ಗಳಿಸಿ ಔಟಾದರು. ನಂತರ ಬಂದ ರಾಹುಲ್ ದ್ರಾವಿಡ್, ರಹಾನೆ ಜತೆಗೂಡಿ ತಂಡಕ್ಕೆ 35 ರನ್ಗಳ ಜತೆಯಾಟ ನೀಡಿದರು. ಈ ವೇಳೆ 17 ರನ್ಗಳಿಸಿದ್ದ ದ್ರಾವಿಡ್, ರಜತ್ ಭಾಟಿಯಾ ಎಸೆತದಲ್ಲಿ ಬೌಲ್ಡ್ ಆದರು.
ಈ ವೇಳೆ ಕಣಕ್ಕಿಳಿದ ಸ್ಟುವರ್ಟ್ ಬಿನ್ನಿ 11 ಎಸೆತಗಳಲ್ಲಿ 14 ರನ್ಗಳಿಸಿದರು. ರತನ್ ಶುಕ್ಲಾ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಬಲೆಗೆ ಬಿದ್ದ ಬಿನ್ನಿ, ತಮ್ಮ ಇನಿಂಗ್ಸ್ ಅಂತ್ಯಗೊಳಿಸಿದರು. ನಂತರ ಬಂದ ಅನುಭವಿ ಬ್ಯಾಟ್ಸ್ಮನ್ ಬ್ರಾಡ್ ಹಾಡ್ಜ್, ರಹಾನೆ ಜತೆಗೂಡಿ 38 ರನ್ಗಳ ಜತೆಯಾಟವಾಡಿದರು. ಈ ವೇಳೆ 36 ರನ್ಗಳಿಸಿದ್ದ ರಹಾನೆ, ನಾರಾಯಣ್ ಎಸೆತದಲ್ಲಿ ಎಲ್ಬಿ ಡಬ್ಲ್ಯೂ ಆದರು. ನಂತರದ ಬಂದ ಕೂಪರ್, ಸ್ಟಂಪ್ ಔಟ್ ಆಗುವ ಮೂಲಕ 2ನೇ ಎಸೆತದಲ್ಲೇ ನಿರ್ಗಮಿಸಿದರು. ನಂತರ ಹಾಡ್ಜ್ ಜತೆಯಾದ ಯಾಗ್ನಿಕ್ ತಂಡಕ್ಕೆ 35 ರನ್ಗಳ ಜತೆಯಾಟ ನೀಡಿದರು. ಈ ವೇಳೆ 16 ರನ್ಗಳಿಸಿದ ಯಾಗ್ನಿಕ್ ರನೌಟ್ ಆದರು. ಅಂತಿಮವಾಗಿ ರಾಯಲ್ಸ್ 144 ರನ್ಗಳಿಸಿತು.
ಈ ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ 19 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 125 ರನ್ಗಳಿಸಿತು.
ಆರಂಭದಿಂದಲೂ ನಿರಂತರವಾಗಿ ವಿಕೆಟ್ ಕೈಚೆಲ್ಲಿದ್ದು ಕೆಕೆಆರ್ ತಂಡಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತು.
ಆರಂಭಿಕರಾಗಿ ಕಣಕ್ಕಿಳಿದ ಬಿಸ್ಲಾ 1, ಗಂಭೀರ್ 22, ಕಾಲಿಸ್ 0, ತಿವಾರಿ 14, ಪಠಾಣ್ 0, ಶುಕ್ಲಾ 2, ಭಾಟಿಯಾ 12, ಬ್ರೆಟ್ ಲೀ 5 ರನ್ಗಳಿಸಿ ಔಟಾದರು. ಆದರೆ ಏಕಾಂಗಿ ಹೋರಾಟ ನಡೆಸಿದ ಇಯಾನ್ ಮಾರ್ಗನ್ 38 ಎಸೆತಗಳಲ್ಲಿ 51 ರನ್ಗಳಿಸಿದರಾದರು, ಇವರಿಕೆ ತಕ್ಕ ಸಾಥ್ ಸಿಗದ ಕಾರಣ ತಂಡ ಸೋಲನುಭವಿಸಬೇಕಾಯಿತು. ರಾಜಸ್ಥಾನ್ ತಂಡದ ಪರ 15 ರನ್ ನೀಡಿ 3 ವಿಕೆಟ್ ಪಡೆದ ಕೂಪರ್ ಹಾಗೂ 23 ರನ್ ನೀಡಿ 3 ವಿಕೆಟ್ ಪಡೆದ ತ್ರಿವೇದಿ ಯಶಸ್ವಿ ಬೌಲರ್ ಎನಿಸಿದರು.
ಸ್ಕೋರ್ ಬೋರ್ಡ್
ರಾಜಸ್ಥಾನ್ ರಾಯಲ್ಸ್ 144/6 (20 ಓವರ್)
ವ್ಯಾಟ್ಸನ್ ಸಿ ಮಾರ್ಗನ್ ಬಿ ಬ್ರೆಟ್ ಲೀ 5 (10), ರಹಾನೆ ಎಲ್ಬಿ ಡಬ್ಲ್ಯೂ ಬಿ ನಾರಾಯಣ್ 36 (34), ದ್ರಾವಿಡ್ ಬಿ ಭಾಟಿಯಾ 17 (20), ಬಿನ್ನಿ ಎಲ್ಬಿ ಡಬ್ಲ್ಯೂ ಬಿ ರತನ್ ಶುಕ್ಲಾ 14 (11), ಹಾಡ್ಜ್ ಅಜೇಯ 46 (31), ಕೂಪರ್ ಸ್ಟಂಪ್ ಬಿಸ್ಲಾ ಬಿ ನಾರಾಯಣ್ 0 (1), ಯಾಗ್ನಿಕ್ ರನೌಟ್ 16 (11), ಶ್ರೀಶಾಂತ್ ಅಜೇಯ 1 (2), ಇತರೆ 9
ವಿಕೆಟ್ ಪತನ: 1-11, 2-46, 3-63, 4-101, 5-101, 6-137
ಬೌಲಿಂಗ್: ಬ್ರೆಟ್ ಲೀ 4-0-20-1, ಶಮಿ 3-0-26-0, ನಾರಾಯಣ್ 4-0-28-2, ಕಾಲಿಸ್ 4-0-28-0, ಭಾಟಿಯಾ 3-0-21-1, ಶುಕ್ಲಾ 2-0-14-1
ಕೋಲ್ಕತಾ ನೈಟ್ರೈಡರ್ಸ್ 125 (19 ಓವರ್)
ಬಿಸ್ಲಾ ಬಿ ಶುಕ್ಲಾ 1 (4), ಗಂಭೀರ್ ಸಿ ಯಾಗ್ನಿಕ್ ಬಿ ತ್ರಿವೇದಿ 22 (22), ಕಾಲಿಸ್ ಸಿ ಯಾಗ್ನಿಕ್ ಶುಕ್ಲಾ 0 (1), ತಿವಾರಿ ಎಲ್ಬಿಡಬ್ಲ್ಯೂ ಬಿ ತ್ರಿವೇದಿ 14 (13), ಮಾರ್ಗನ್ ಬಿ ಕೂಪರ್ 51 (38), ಪಠಾಣ್ ಸಿ ಯಾಗ್ನಿಕ್ ಬಿ ಕೂಪರ್ 0 (2), ರತನ್ ಶುಕ್ಲಾ ಸಿ ಶುಕ್ಲಾ ಬಿ ತ್ರಿವೇದಿ 2 (9), ಭಾಟಿಯಾ ಸಿ ಬಿನ್ನಿ ಬಿ ಟೈಟ್ 12 (7), ಬ್ರೆಟ್ ಲೀ ಸಿ ಶುಕ್ಲಾ ಬಿ ಶ್ರೀಶಾಂತ್ 5 (6), ಶಮಿ ಸಿ ರಹಾನೆ ಬಿ ಕೂಪರ್ 5 (10), ನಾರಾಯಣ್ ಅಜೇಯ 2 (2), ಇತರೆ 11.
ವಿಕೆಟ್ ಪತನ: 1-19, 2-20, 3-40, 4-43, 5-44, 6-56, 7-90, 8-103, 9-122, 10-125
ಬೌಲಿಂಗ್: ಶ್ರೀಶಾಂತ್ 4-0-25-1, ಟೈಟ್ 4-0-29-1, ಶುಕ್ಲಾ 3-0-28-2, ಕೂಪರ್ 4-0-15-3, ತ್ರಿವೇದಿ 4-0-23-3