30 ನಿಮಿಷದಲ್ಲಿ ಟಿಕೆಟ್ ಖಾಲಿ
ದುಬೈ: ಮುಂಬರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಜೂ.15 ರಂದು ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಹಂಚಿಕೆ ಮಾಡಲಾಗಿದ್ದ ಟಿಕೆಟ್ ಸಂಪೂರ್ಣವಾಗಿ ಮಾರಾಟವಾಗಿದೆ. ಇಂದಿನ ಟಿಕೆಟ್ ಮಾರಾಟದಲ್ಲಿ ಅಭಿಮಾನಿಗಳು ತೋರಿದ ಆಸಕ್ತಿಯಿಂದ ನಮಗೆ ಅಚ್ಚರಿಯಾಗಿದೆ. ಭಾರತ - ಪಾಕಿಸ್ತಾನ ನಡುವಿನ ಪಂದ್ಯದ ಹಂಚಿಕೆ ಮಾಡಲಾದ ಟಿಕೆಟ್ಗಳು ಕೇವಲ 30 ನಿಮಿಷದಲ್ಲಿ ಮಾರಾಟವಾಗಿದೆ.