ಡೇರ್ ಡೆವಿಲ್ಸ್‌ಗೆ ದಿನೇಶ್ ದಂಡನೆ
ಮುಂಬೈ: ಆರಂಭಿಕ ಆಘಾತ ಅನುಭವಿಸಿದ ನಂತರ ರನ್ ಮಳೆ ಸುರಿಸಿದ ದಿನೇಶ್ ಕಾರ್ತಿಕ್ (86) ಹಾಗೂ ರೋಹಿತ್ ಶರ್ಮಾ (74) ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 210 ರನ್‌ಗಳ ಬೃಹತ್ ಸವಾಲೊಡ್ಡಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 209 ರನ್ ಪೇರಿಸಿತು. ಪಾಂಟಿಂಗ್ ಮೊದಲ ಓವರ್‌ನಲ್ಲೇ ಶೂನ್ಯ ಸಂಪಾದನೆಯೊಂದಿಗೆ ಇರ್ಫಾನ್ ಪಠಾಣ್‌ಗೆ ವಿಕೆಟ್ ಒಪ್ಪಿಸಿದರೆ, ಎರಡನೇ ಓವರ್‌ನಲ್ಲಿ ಜಯವರ್ಧನೆಯವರ ಚುರುಕಿನ ಕ್ಷೇತ್ರ ರಕ್ಷಣೆಯಿಂದ ರನೌಟ್ ವೆಕೆಟ್ ತೆತ್ತರು. ನಂತರ ಜತೆಯಾದ ದಿನೇಶ್ ಕಾರ್ತಿಕ್ ಹಾಗೂ ರೋಹಿತ್ ಶರ್ಮಾ ಜತೆಯಾಟದಲ್ಲಿ 3ನೇ ವಿಕೆಟ್ 132 ರನ್ ಪೇರಿಸುವ ಮೂಲಕ ತಂಡಕ್ಕೆ ಆಶ್ರಯವಾದರು. ಹೊಡಿಬಡಿ ಆಟಕ್ಕೆ ಮುಂದಾಗಿ 48 ಎಸೆತಗಳನ್ನು ಎದಿರಿಸಿದ ದಿನೇಶ್ ಮೊತ್ತದಲ್ಲಿ 2 ಸಿಕ್ಸ್‌ರ್ ಮತ್ತು 14 ಬೌಂಡರಿಗಳು ಸೇರಿದ್ದವು. 2 ಸಿಕ್ಸರ್, 4 ಬೌಂಡರಿ ಸೇರಿದ್ದವು.