'ತಂತ್ರ ಫಲಿಸಿತು'
ಜೈಪುರ: ಹಾಲಿ ಚಾಂಪಿಯನ್ಸ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಭರ್ಜರಿ ಜಯ ಸಾಧಿಸಿದ್ದು, ಈ ಪಂದ್ಯಕ್ಕೆ ನಾವು ರೂಪಿಸಿದ್ದ ತಂತ್ರ ಫಲಿಸಿದೆ ಎಂದು ತಂಡದ ಬೌಲರ್ ಸಿದ್ಧಾರ್ಥ್ ತ್ರಿವೇದಿ ತಿಳಿಸಿದ್ದಾರೆ. ನಾವು ಆರಂಭಿಕ ವಿಕೆಟ್ ಕಬಳಿಸಿದರೆ ಪಂದ್ಯದಲ್ಲಿ ಗೆಲ್ಲುವುದಾಗಿ ನಾವು ಚಿಂತಿಸಿದ್ದೆವು. ಈ ವೇಳೆ ಪಿಚ್ ಬೌಲಿಂಗ್ ಮಾಡಲು ಸೂಕ್ತವಾಗಿತ್ತು, ವೇಗಿಗಳಿಗೆ ಸ್ವಲ್ಪಮಟ್ಟಿನ ತಿರುವು ನೀಡುತಿತ್ತು. ಎಲ್ಲವು ನಮ್ಮ ಯೋಜನೆಯಂತೆ ಸಾಗಿದವು ಎಂದು ತ್ರಿವೇದಿ ತಿಳಿಸಿದರು.