ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮಹಿಳಾ ತಂಡಕ್ಕೆ ಸಲಹೆಗಾರ ನೇಮಕ

Mainashree
Updated On : 10 Apr 2013, 12:51 pm

ನವದೆಹಲಿ: ಭಾರತ ಮಹಿಳಾ ಹಾಕಿ ತಂಡವನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ದೃಢವಾಗಿಡಬೇಕೆಂಬ ಉದ್ದೇಶದಿಂದ ಹಾಕಿ ಇಂಡಿಯಾ, ತಂಡಕ್ಕೆ ವೈಜ್ಞಾನಿಕ ಸಲಹೆಗಾರರನ್ನು ನೇಮಕ ಮಾಡಿದೆ. ಮಂಗಳವಾರ ಮ್ಯಾಥ್ಯೂ ಟ್ರೆಡ್ರಿಯಾ ಅವರನ್ನು ವೈಜ್ಞಾನಿಕ ಸಲಹೆಗಾರನಾಗಿ ಹಾಕಿ ಇಂಡಿಯಾ ಆಯ್ಕೆ ಮಾಡಿದೆ. ಈ ಹಿಂದೆ ಮ್ಯಾಥ್ಯೂ ಆಸ್ಟ್ರೇಲಿಯಾದ ವೃತ್ತಿಪರ ರಗ್ಬಿ ತಂಡ ನ್ಯೂಕಾಸ್ಟೆಲ್ ನೈಟ್ಸ್ ತಂಡಕ್ಕೆ 2ವರ್ಷಗಳ ಕಾಲ ಕೆಲಸ ಮಾಡಿರುವ ಅನುಭವವಿದೆ.  ನಮ್ಮ ಹಿರಿಯ ಹಾಗು ಕಿರಿಯ ತಂಡಗಳು ಮಹತ್ವದ ಪಂದ್ಯಾವಳಿಗಳಾದ 3ನೇ ಸುತ್ತಿನ ಎಫ್‌ಎಚ್‌ಐ ವರ್ಲ್ಡ್ ಲೀಗ್, 2013ರ ಕಿರಿಯ ಮಹಿಳಾ ವಿಶ್ವಕಪ್‌ಗೆ ಸಿದ್ಧತೆಗಳನ್ನು ನಡೆಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement