ಜಯರಾಮ್ ದ್ವಿತೀಯ ಸುತ್ತಿಗೆ
ಆಕ್ಲಂಡ್: ಭಾರತದ ಬ್ಯಾಡ್ಮಿಂಟನ್ ಆಟಗಾರರಾದ ಅಜಯ್ ಜಯರಾಮ್, ಆರ್ಎಂವಿ ಗುರುಸೈದತ್, ಆನಂದ್ ಪವಾರ್, ಚೇತನ್ ಆನಂದ್, ಅರವಿಂದ್ ಭಟ್ ಹಾಗೂ ಕಿರ್ತೀಶ್ ಧಿಂಡ್ವಾಲ್ ನ್ಯೂಜಿಲೆಂಡ್ ಬ್ಯಾಡ್ಮಿಂಟನ್ ಓಪನ್ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಎಲ್ಲರೂ ನೇರ ಸೆಟ್ಗಳಿಂದ ಗೆಲ್ಲುವ ಮೂಲಕ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದು ವಿಶೇಷವಾಗಿತ್ತು.
ಜಯರಾಮ್ 17 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಲೇಷ್ಯಾದ ವಿನ್ಸನ್ ನಿಯೋ ಅವರನ್ನು 21-5, 22-20 ನೇರ ಸೆಟ್ಗಳಿಂದ ಮಣಿಸಿದರು. ಗುರುಸೈದತ್, ನ್ಯೂಜಿಲೆಂಡ್ನ ಚಾನ್ಸ್ ಚೆಂಗ್ ಅವರನ್ನು 21-15, 21-7 ನೇರ ಸೆಟ್ಗಳಿಂದ ಪರಾಭವಗೊಳಿಸಿದರು. 5ನೇ ಶ್ರೇಯಾಂಕ ಪಡೆದಿರುವ ಚೇತನ್ ಆನಂದ್ ಚೀನಾದ ಹೌಯೀ ಟೈನ್ ವಿರುದ್ಧ 21-15, 21-19 ಸೆಟ್ಗಳಿಂದ ಜಯ ಕಂಡರು. ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಧಿಂಢ್ವಾಲ್, ಸ್ಥಳೀಯ ಆಟಗಾರ ರೇಸ್ ಹಾಪ್ಕಿನ್ ಅವರನ್ನು 21-10, 21-7 ನೇರ ಸೆಟ್ಗಳ ಅಂತರದಿಂದ ಪರಾಭವಗೊಳಿಸಿದರು.
ಇನ್ನು ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾಗವಹಿಸಿರುವ ಭಾರತದ ಏಕೈಕ ಆಟಗಾರ್ತಿ ಶಾರದಾ ಜಾಸ್ತಿ, ಗುರುವಾರ ನಡೆಯಲಿರುವ ಅರ್ಹತಾ ಸುತ್ತಿನಲ್ಲಿ ವಿಕಿ ಕೋಪ್ಲ್ಯಾಂಡ್ ಅವರನ್ನು ಎದುರಿಸಲಿದ್ದಾರೆ.