ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಧೋನಿ ಪಾಲಿಗೆ ರಜನಿಕಾಂತ್ ಆದ ರವೀಂದ್ರ ಜಡೇಜಾ

Mainashree
Updated On : 10 Apr 2013, 11:02 am

ಚಂಡೀಗಢ: ನಮಗೆ ರಜನೀಕಾಂತ್ ಬಗೆಗಿನ ಹಾಸ್ಯದ ತುಣುಕುಗಳು ಗೊತ್ತು. ಇದೀಗ, ರವೀಂದ್ರ ಜಡೇಜಾ ಹೆಸರಿನಲ್ಲಿ 'ರಜನೀ ಜೋಕ್ಸ್‌' ಮಾದರಿಯ ಜೋಕ್‌ಗಳು ಎಲ್ಲೆಡೆಯೂ ಹೊಸ ಹವಾ ಸೃಷ್ಟಿಸಿವೆ. ಈ ಜೋಕ್‌ಗಳನ್ನು ಸೃಷ್ಟಿಸಿರುವುದು ಬೇರ್ಯಾರೂ ಅಲ್ಲ.... ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ.
ಹೌದು... ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ರವೀಂದ್ರ ಜಡೇಜಾ ಅವರ ಬಗ್ಗೆ ಜೋಕ್‌ಗಳನ್ನು ಹರಿಯಬಿಟ್ಟಿರುವ ಧೋನಿ, ಜಡೇಜಾ ಅವರನ್ನು 'ರಜನಿ ಜೋಕ್ಸ್‌' ಮಾದರಿಯಲ್ಲೇ ಹಾಸ್ಯ ಮಾಡಿದ್ದಾರೆ. ಸದ್ಯಕ್ಕೆ ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿ ರವೀಂದ್ರ ಅವರಿಗೆ ಸಹಆಟಗಾರರಾಗಿರುವ ಧೋನಿ ಅವರ ಈ ಜೋಕುಗಳನ್ನು ತಂಡದ ಮತ್ತಿತರ ಆಟಗಾರರಾದ ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ ಕೂಡ ಮೆಚ್ಚಿಕೊಂಡಿದ್ದಾರೆ.
ಪ್ರತಿಯೊಂದು ಜೋಕ್‌ನಲ್ಲೂ ಜಡೇಜಾ ಅವರನ್ನು 'ಸರ್‌' ಎಂದೇ ಸಂಬೋಧಿಸಿರುವ ಧೋನಿ, ತಮ್ಮ ಮೊದಲ ಜೋಕ್‌ನಲ್ಲಿ 'ದೇವರಿಗೆ ರಜನಿ ಸರ್‌ಗೆ ವಯಸ್ಸಾಗುತ್ತಿರುವುದರ ಅರಿವಿದೆ. ಹಾಗಾಗಿ, ರಜನಿ ಬದಲಿಗೆ ರವೀಂದ್ರ ಜಡೇಜಾ ಅವರನ್ನು ಸೃಷ್ಟಿಸಿದ್ದಾನೆ' ಎಂದು ಹೇಳಿದ್ದಾರೆ.
ತಮ್ಮ ಮುಂದಿನ ಜೋಕ್‌ನಲ್ಲಿ 'ರವೀಂದ್ರ ಜಡೇಜಾ ಬಾಲಕನಾಗಿದ್ದಾಗ, ಆಡಲು ಮಣ್ಣಿನಿಂದ ಪುಟ್ಟ ಗುಡ್ಡವನ್ನು ಮಾಡಿಕೊಂಡಿದ್ದನಂತೆ. ಈಗ ನಾವು ಅದನ್ನು 'ಮೌಂಟ್ ಎವರೆಸ್ಟ್‌' ಎಂದು ಕರೆಯುತ್ತಿದ್ದೇವೆ' ಎಂದಿದ್ದಾರೆ.

ಧೋನಿ ಹರಿಸಿರುವ ಮತ್ತಷ್ಟು ಹಾಸ್ಯದ ಹೊನಲು ಹೀಗಿವೆ....
'ಜಡೇಜಾ ಸರ್ ಅಭ್ಯಾಸ ಮಾಡಲು ನಿರ್ಧರಿಸಿದರೆ ಸಾಕು ಕ್ರೀಡಾಂಗಣವೇ ಅವರ ಬಳಿಗೆ ಸಾಗುತ್ತೆ..'
ರವೀಂದ್ರ ಜಡೇಜಾ ಸರ್ ಅವರು ಜೀಪ್ ಡ್ರೈವ್ ಮಾಡುತ್ತಿದ್ದರೆ, ಜೀಪ್ ನಿಂತಲ್ಲೇ ನಿಂತಿರುತ್ತೆ. ಆದರೆ, ರಸ್ತೆಯೇ ವೇಗವಾಗಿ ಸಾಗುತ್ತಿರುತ್ತದೆ'.
'ನಿಜಹೇಳಬೇಕಂದ್ರೆ, ಜಡೇಜಾ ಕ್ಯಾಚ್ ಹಿಡಿಯೋಕೆ ಓಡಿ ಹೋಗಲ್ಲ. ಚೆಂಡೇ ಅವರನ್ನು ಹುಡುಕಿಕೊಂಡು ಹೋಗಿ ಅವರ ಕೈಯ್ಯಲ್ಲಿ ಬೀಳುತ್ತೆ'
'ಜಡೇಜಾ ಮಾಡುವ ಪ್ರತಿಯೊಂದು ತಪ್ಪುಗಳೂ ಜಗತ್ತಿನ ಪಾಲಿಗೆ ಹೊಸ ಅನ್ವೇಷಣೆಗಳಾಗಿವೆ. ದೈನಂದಿನ ಜೀವನದಲ್ಲಿ ಅವರು ಹೀಗೆ ಮಾಡಿರುವ ಅದೆಷ್ಟೋ ಅನ್ವೇಷಣೆಗಳಿಗೆ ಶೀಘ್ರದಲ್ಲೇ 'ಪೇಟೆಂಟ್‌' ಸಿಗಲಿವೆ.'

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement