ರಾಜ್ಯಮಟ್ಟದ ಬಾಸ್ಕೆಟ್ಬಾಲ್
ಬೆಂಗಳೂರು: ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆ, ಬಾಲಕ ಮತ್ತು ಬಾಲಕಿಯರಿಗಾಗಿ ರಾಜ್ಯ ಯುವ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ಆಯೋಜಿಸಿದೆ. ಇದೇ ಏಪ್ರಿಲ್ 13ರಿಂದ 18ರವರೆಗೆ ಬೆಂಗಳೂರಿನ ಕಂಠೀರವ ಸ್ಟೇಡಿಯಂನ ಬಾಸ್ಕೆಟ್ಬಾಲ್ ಅಂಗಣದಲ್ಲಿ ಚಾಂಪಿಯನ್ಷಿಪ್ ನಡೆಯಲಿದೆ. ರಾಜ್ಯದ ಎಲ್ಲ ಭಾಗಗಳಿಂದ 46 ಬಾಲಕರ ತಂಡಗಳು ಮತ್ತು 24 ಬಾಲಕಿಯರು ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ಪಂದ್ಯಾವಳಿಯನ್ನು ನಾಕೌಟ್ ಮತ್ತು ಲೀಗ್ ಆಧಾರದ ಮೇಲೆ ನಡೆಸಲಾಗುತ್ತದೆ. 01.01.1997ರ ನಂತರ ಜನಸಿದವರು ಮಾತ್ರ ಪಂದ್ಯಾವಳಿಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಮಾಹಿತಿಗಾಗಿ ಮೊ. 09845479989.