ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಇಂದು ವಾರಿಯರ್ಸ್ ವಿರುದ್ಧ ಇಂಡಿಯನ್ಸ್ ಕದನ

Mainashree
Updated On : 13 Apr 2013, 12:46 pm

ಮುಂಬೈ: ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ತಾನು ಕಳೆದುಕೊಂಡಿದ್ದ ಆತ್ಮವಿಶ್ವಾಸವನ್ನು ಪುನಃ ಸಂಪಾದಿಸಿರುವ ಪುಣೆ ವಾರಿಯರ್ಸ್ ತಂಡ, ಶನಿವಾರ ನಡೆಯಲಿರುವ ತನ್ನ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.
ಈ ಬಾರಿಯ ಐಪಿಎಲ್ನಲ್ಲಿ ಸೋಲಿನ ಮೂಲಕವೇ ತನ್ನ ಅಭಿಯಾನ ಆರಂಭಿಸಿದ್ದ ಪುಣೆ ವಾರಿಯರ್ಸ್ ತಂಡ, ಗುರುವಾರ ನಡೆದ ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್ಗಳ ಜಯ ಸಂಪಾದಿಸಿತು.
ಗುರುವಾರದ ಪಂದ್ಯವನ್ನು ಗಮನಿಸಿದರೆ, ಪುಣೆ ತಂಡದ ಬ್ಯಾಟಿಂಗ್ ಲೈನ್-ಅಪ್ ಬಲಗೊಂಡಿರುವುದು ಸ್ಪಷ್ಟವಾಗಿದೆ. ಆರಂಭಿಕರಾದ ರಾಬಿನ್ ಉತ್ತಪ್ಪ, ಆರೋನ್ ಫಿಂಚ್ ಇಬ್ಬರೂ ತಂಡಕ್ಕೆ ಯಾವುದೇ ಕ್ಷಣದಲ್ಲೂ ಆಸರೆಯಾಗಬಲ್ಲ ಭರವಸೆ ಮೂಡಿಸಿದ್ದಾರೆ. ಅದರಲ್ಲೂ ಫಿಂಚ್ ಅವರ ಆಕ್ರಮಣಕಾರಿ ಬ್ಯಾಟಿಂಗ್, ಗುರುವಾರದ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. 53 ಎಸೆತಗಳನ್ನೆದುರಿಸಿದ್ದ ಫಿಂಚ್, 63 ರನ್ ಬಾರಿಸಿದ್ದರು. ಉತ್ತಮ ಲಯ ಕಂಡುಕೊಳ್ಳುವಲ್ಲಿ ಎಡವುತ್ತಿದ್ದ ಯುವರಾಜ್ ಕೂಡಾ ಗುರುವಾರ, ಅಜೇಯ 28 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
ಮುಂಬೈ ತಂಡದಲ್ಲಿ, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಭರವಸೆ ಮೂಡಿಸಿದ್ದಾರೆ. ಇವರೊಂದಿಗೆ ರೋಹಿತ್ ಶರ್ಮಾ, ಆಂಬಟಿ ರಾಯುಡು, ಕೀರನ್ ಪೊಲಾರ್ಡ್ ಸೇರಿದಂತೆ, ನಾಯಕ ರಿಕಿ ಪಾಂಟಿಂಗ್, ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ - ಇವರುಗಳು ತಂಡದ ಪ್ರಮುಖ ಆಟಗಾರರಾಗಿದ್ದಾರೆ.

ಪುಣೆ ವಾರಿಯರ್ಸ್

ಏಕಲವ್ಯ ದ್ವಿವೇದಿ, ಉದಿತ್ ಬಿರ್ಲಾ, ಮೈಕಲ್ ಕ್ಲಾರ್ಕ್, ಅಶೋಕ್ ದಿಂಡಾ, ರೈಫಿ ಗೊಮೇಜ್, ಹರ್ಪ್ರೀತ್ ಸಿಂಗ್, ಧೀರಜ್ ಜಾದವ್, ಭುವನೇಶ್ವರ್ ಕುಮಾರ್, ಅನುಸ್ತುಪ್ ಮಜುಂಮ್ದಾರ್, ಮಿಥುನ್ ಮನಾಸ್, ಮಿಚ್ಚೆಲ್ ಮಾರ್ಷ್, ಆ್ಯಂಜಲೋ ಮ್ಯಾಥ್ಯೂಸ್, ಅಜಂತಾ ಮೆಂಡೀಸ್, ಅಲಿ ಮುರ್ತಾಜಾ, ಅಭಿಶೇಕ್ ನಾಯರ್, ಈಶ್ವರ್ ಪಾಂಡೆ, ಮನೀಶ್ ಪಾಂಡೆ, ವೇಯ್ನ್ ಪಾರ್ನೆಲ್, ಪರ್ವೆಜ್ ರಸೂಲ್, ಮಹೇಶ್ ರಾವತ್, ಕೇನ್ ರಿಚರ್ಡ್ಸನ್, ಮರ್ಲಾನ್ ಸ್ಯಾಮ್ಯೂಯೆಲ್ಸ್, ರಾಹುಲ್ ಶರ್ಮಾ, ಸ್ಟೀವ್ ಸ್ಮಿತ್, ಟಿ.ಸುಮನ್, ತಮಿಮ್ ಇಕ್ಬಾಲ್, ರಾಸ್ ಟೇಲರ್, ಕೃಷ್ಣಕಾಂತ್ ಉಪಾದ್ಯಾಯ್, ರಾಬಿನ್ ಉತ್ತಪ್ಪ, ಶ್ರೀಕಾಂತ್ ವಾ, ಲ್ಯೂಕು ರೈಟ್, ಯುವರಾಜ್ ಸಿಂಗ್.


ಮುಂಬೈ ಇಂಡಿಯನ್ಸ್
ರಿಕಿ ಪಾಂಟಿಂಗ್ (ನಾಯಕ), ಸಚಿನ್ ತೆಂಡೂಲ್ಕರ್, ಅಬು ನಚಿಮ್, ಅಮಿತೊಜ್ ಸಿಂಗ್, ಐಡೆನ್ ಬ್ಲಿಜರ್ಡ್, ಯುಜ್ವೆಂದ್ರ ಚಾಹಲ್, ನೇಥನ್ ಕೌಲ್ಟರ್ ನೆಲ್, ರಿಶಿ ಧವನ್, ಜೇಮ್ಸ್ ಫ್ರಾಂಕ್ಲಿನ್, ಹರ್ಭಜನ್ ಸಿಂಗ್, ಫಿಲಿಪ್ ಹ್ಯೂಸ್, ಮಿಚ್ಚೆಲ್ ಜಾನ್ಸನ್, ದಿನೇಶ್ ಕಾರ್ತಿಕ್, ದವಳ್ ಕುಲಕರ್ಣಿ, ಲಸಿತ್ ಮಾಲಿಂಗಾ, ಸುಶಾಂತ್ ಮರಾತೆ, ಗ್ಲೆನ್ ಮ್ಯಾಕ್ಸ್ವೆಲ್, ಪ್ರಗ್ಯಾನ್ ಓಜಾ, ಜೇಕಬ್ ಓರಂ, ಅಕ್ಷರ್ ಪಟೇಲ್, ಮುನಾಫ್ ಪಟೇಲ್, ಕೀರನ್ ಪೊಲಾರ್ಡ್, ಅಂಬಟಿ ರಾಯುಡು, ಜಲಜ್ ಸಕ್ಸೇನಾ, ರೋಹಿತ್ ಶರ್ಮಾ, ಡ್ವೇನ್ ಸ್ಮಿತ್, ಪವನ್ ಸುಯಾಲ್, ಆದಿತ್ಯ ತಾರೆ, ಸೂರ್ಯ ಕುಮಾರ್ ಯಾದವ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement