ಐ- ಲೀಗ್: ಲ್ಯಾನ್ಸಿಂಗ್ ತಂಡಕ್ಕೆ ಜಯ
ಬೆಂಗಳೂರು: ನಗರದ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ ಲೀಗ್ 2ನೇ ಡಿವಿಷನ್ನ ಅಂತಿಮ ಸುತ್ತಿನ ಮೊದಲ ಹಂತದ ಶುಕ್ರವಾರದ ಪಂದ್ಯದಲ್ಲಿ ಲ್ಯಾನ್ಸಿಂಗ್ ತಂಡವು ರಂದಾಜಿದ್ ತಂಡದ ವಿರುದ್ಧ ಜಯ ಸಾಧಿಸಿದೆ.
ಪಂದ್ಯದ ಆರಂಭದಲ್ಲಿ ರಂದಾಜಿದ್ ತಂಡ ಮೊದಲು ಗೋಲುಗಳಿಸಿತಾದರು, ನಂತರ ಲ್ಯಾನ್ಸಿಂಗ್ ತಂಡ ನೀಡಿದ ಚುರುಕಿನ ಆಟ ಪ್ರದರ್ಶಿಸಿ 4-2 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಲ್ಯಾನ್ಸಿಂಗ್ ತಂಡದ ಪರ ಡೇನಿಯಲ್ 62ನೇ ಹಾಗೂ 79ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಜೋಲ್ 40ನೇ ಹಾಗೂ ಪೆನ್ 86ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ರಂದಾಜಿದ್ ತಂಡದ ಪರ ಶಿನ್ ಹೊಜುನ್ 4ನೇ ನಿಮಿಷದಲ್ಲಿ ಹಾಗೂ ತಮಂಗ್ 25ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.