ಗೆಲುವಿನ ರುಚಿ ಕಂಡ ಪುಣೆ
ಪುಣೆ: ತಮ್ಮ ಮೊದಲೆರಡು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ತೋರಿ ಸೋಲನುಭವಿಸಿದ್ದ ಪುಣೆ ವಾರಿಯರ್ಸ್ ತಂಡ ಗುರುವಾರ ನಡೆದ ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಗೆಲುವಿನ ರುಚಿ ಕಂಡಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್ಗಳಲ್ಲಿ 145 ರನ್ಗಳನಷ್ಟೇ ಪೇರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪುಣೆ ವಾರಿಯರ್ಸ್ ತಂಡ 18.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 148 ರನ್ಗಳಿಸಿ ಪಂದ್ಯಾವಳಿಯಲ್ಲಿ ಮೊದಲ ಜಯ ಸಾಧಿಸಿತು. ಪುಣೆ ತಂಡದ ಪರ ಫಿಂಚ್ 64, ಉತ್ತಪ್ಪ 38, ಯುವರಾಜ್ ಅಜೇಯ 28 ರನ್ಗಳಿಸಿದರು. ಅಲ್ಲದೆ ಇದಕ್ಕೂ ಮುನ್ನ ಉತ್ತಮ ದಾಳಿ ನಡೆಸಿದ ಪುಣೆ ತಂಡದ ಪರ ರಾಹುಲ್ ಶರ್ಮಾ ಹಾಗೂ ಯುವರಾಜ್ ಸಿಂಗ್ ತಲಾ 2 ವಿಕೆಟ್ ಪಡೆದರು.