ಗೇಯ್ಲ್ ಆರ್ಭಟಕ್ಕೆ ಕೆಕೆಆರ್ ತತ್ತರ
ಬೆಂಗಳೂರು: ಆರ್ಸಿಬಿ ತಂಡ ತಮ್ಮ ಈ ಬಾರಿಯ ಐಪಿಎಲ್ನಲ್ಲಿ ಸಾಂಘಿಕ ಪ್ರದರ್ಶನವನ್ನು ತೋರುತ್ತಿದ್ದು, ಗುರುವಾರ ನಡೆದ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧದ ಪಂದ್ಯದಲ್ಲು ಮುಂದುವರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ, ಎದುರಾಳಿ ತಂಡವನ್ನು 20 ಓವರ್ಗಳಲ್ಲಿ 154 ರನ್ಗಳಿಗೆ ನಿಯಂತ್ರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್ಸಿಬಿ ತಂಡ ಕ್ರಿಸ್ ಗೇಯ್ಲ್ ಹಾಗೂ ವಿರಾಟ್ ಕೊಹ್ಲಿಯವರ ಅದ್ಭುತ ಬ್ಯಾಟಿಂಗ್ ನೆರವಿನಿಂದ 17.3 ಓವರ್ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.
ಕಿತ್ತಾಡಿದ ಗೌತಿ-ಕೊಹ್ಲಿ: ಕೆಕೆಆರ್ ನೀಡಿದ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡ ಆರಂಭದಲ್ಲೇ ಅಗರ್ವಾಲ್ ವಿಕೆಟ್ ಕಳೆದುಕೊಂಡಿತು. ಈ ವೇಳೆ ಕ್ರಿಸ್ ಗೇಯ್ಲ್ ಜತೆಗೂಡಿದ ನಾಯಕ ವಿರಾಟ್ ಕೊಹ್ಲಿ ತಂಡಕ್ಕೆ 53 ರನ್ಗಳ ಜತೆಯಾಟ ನೀಡಿದರು.
ಅಲ್ಲದೆ ವಯಕ್ತಿಕವಾಗಿ 27 ಎಸೆತದಲ್ಲಿ 35 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಕೊಹ್ಲಿ ಇನಿಂಗ್ಸ್ನ 9.1ನೇ ಓವರ್ನಲ್ಲಿ ಬಾಲಾಜಿ ಎಸೆತದಲ್ಲಿ ಮಾರ್ಗನ್ಗೆ ಕ್ಯಾಚಿತ್ತು ನಿರಾಸೆಯಿಂದ ಪೆವಿಲಿಯನ್ಗೆ ಹೋಗುವಾಗ ಕೆಕೆಆರ್ ತಂಡದ ನಾಯಕ ಗಂಭೀರ್ ವರ್ತನೆಗೆ ಬೇಸತ್ತ ಕೊಹ್ಲಿ ಗಂಭೀರ್ ವಿರುದ್ಧ ಮಾತಿನ ಚಕಮಕಿಗೆ ಮುಂದಾದರು.