ಭಾರತಕ್ಕೆ ಮತ್ತೆ ಕಾಲಿಟ್ಟ ಚಾಂಪಿಯನ್ಸ್ ಲೀಗ್
ನವದೆಹಲಿ: ಕಳೆದ ಬಾರಿಯ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ಆತಿಥ್ಯವನ್ನು ದಕ್ಷಿಣ ಆಫ್ರಿಕಾವಹಿಸಿಕೊಂಡಿದ್ದು, ಈ ಬಾರಿಯ ಪಂದ್ಯಾವಳಿಯನ್ನು ಭಾರತ ಆತಿಥ್ಯ ವಹಿಸಿಕೊಳ್ಳಲಿದೆ.
ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ಆಡಳಿತ ಮಂಡಳಿ ದಿನಾಂಕ ಹಾಗೂ ಮಾದರಿಯನ್ನು ಪ್ರಕಟಿಸಿದೆ. ಅದರಂತೆ, ಈ ಪಂದ್ಯಾವಳಿ ಸೆ.17 ರಿಂದ ಅ. 6ರವರೆಗೆ ನಡೆಯಲಿದೆ. ಕಳೆದ ಐದು ವರ್ಷಗಳಲ್ಲಿ ಮೂರನೇ ಬಾರಿಗೆ ಭಾರತ ಚಾಂಪಿಯನ್ಸ್ ಲೀಗ್ ಟಿ20 ಪಂದ್ಯಾವಳಿಯ ಆತಿಥ್ಯವನ್ನು ವಹಿಸಿಕೊಳ್ಳುತ್ತಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಈ ಬಾರಿಯೂ ಕಳೆದೆರಡು ಬಾರಿಯ ಪಂದ್ಯಾವಳಿಯಂತೆ ಕ್ವಾಲಿಫೈಯರ್ ಮೂಲಕ ಎರಡು ಗುಂಪುಗಳಿರುತ್ತವೆ. ಈ ಪಂದ್ಯಚಾವಳಿಯಲ್ಲಿ ಒಟ್ಟು 29 ಪಂದ್ಯಗಳು ನಡೆಯಲಿವೆ.