ಐಒಸಿ ಸಭೆಗೆ ಆಹ್ವಾನ
ನವದೆಹಲಿ: ಬರುವ ಮೇ 7ರಂದು ಲಾವುಸನ್ನೆಯಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗವಹಿಸಲು, ಅಮಾನತುಗೊಳಿಸಲಾಗಿರುವ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಮತ್ತು ಕ್ರೀಡಾ ಸಚಿವಾಲಯವನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಆಹ್ವಾನಿಸಿದೆ. ಒಲಿಂಪಿಕ್ಸ್ ಸಮಿತಿಗೆ ಮರಳಿ ಐಒಎ ಸೇರಿಸಿಕೊಳ್ಳಲು ಐಒಸಿ ಮತ್ತೊಂದು ಪ್ರಯತ್ನ ನಡೆಸಿದೆ.