ಟಿಟಿ: ಶರತ್, ಶಾಮಿನಿಗೆ ಸೋಲು
ನವದೆಹಲಿ: ಭಾರತದ ಉದಯೋನ್ಮುಖ ಟಿಟಿ ಕ್ರೀಡಾಳುಗಳಾದ ಅಚಂತಾ ಶರತ್ ಕಮಲ್ ಹಾಗೂ ಕೆ. ಶಾಮಿನಿ ಶಾಂಘೈನಲ್ಲಿ ನಡೆಯುತ್ತಿರುವ 26ನೇ ಟೇಬಲ್ ಟೆನಿಸ್ ಏಷ್ಯನ್ ಕಪ್ ಪಂದ್ಯಾವಳಿಯ ಮುಖ್ಯ ಸುತ್ತಿನಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಈ ಇಬ್ಬರೂ ಸೋಲು ಕಂಡರು. ಪುರುಷರ ವಿಭಾಗದಲ್ಲಿ ಶರತ್ ಅವರು ಹಾಂಗ್‌ಕಾಂಗ್‌ನ ತಾಂಗ್ ಪೆಂಗ್ ಅವರ ವಿರುದ್ಧ 11-13, 11-7, 11-5, 1-11, 8-11, 7-11 ಅಂತರದಲ್ಲಿ ಸೋಲು ಕಂಡರು. ಮಹಿಳೆಯರ ವಿಭಾಗದಲ್ಲಿ, ಶಾಮಿನಿ ಅವರು ವಿಯೆಟ್ನಾಂನ ತೌನ್ ಕ್ಯುನ್ ಟ್ರಾನ್ ಅವರ ವಿರುದ್ಧ 9-11, 6-11, 6-11, 9-11, 5-11 ಅಂತರದಲ್ಲಿ ಪರಾಭವಗೊಂಡರು.