ದಿವಿಜ್- ಪುರವ ಜೋಡಿಗೆ ಸೋಲು
ನವದೆಹಲಿ: ಭಾರತದ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ ಮೆಕ್ಸಿಕೋ ಎಟಿಪಿ ಚಾಲೆಂಜರ್ ಪಂದ್ಯಾವಳಿಯಲ್ಲಿ ತಮ್ಮ ಹೋರಾಟವನ್ನು ಅಂತ್ಯಗೊಳಿಸಿದೆ. ಭಾರತದ ಜೋಡಿ ಸೆಮಿಫೈನಲ್ ಪಂದ್ಯದಲ್ಲಿ ದೈತ್ಯ ಸಂಹಾರಿ ಮರಿನ್ ಡ್ರಾಗಂಜಾ ಮತ್ತು ಮಟೆ ಪೆವಿಕ್ ಜೋಡಿ ವಿರುದ್ಧ 6-7(2), 4-6 ನೇರ ಸೆಟ್ಗಳ ಅಂತರದಿಂದ ಪರಾಭವ ಹೊಂದುವ ಮುನ್ನ ತೀವ್ರ ಪೈಪೋಟಿ ನಡೆಸಿತು. ಇದರೊಂದಿಗೆ ದಿವಿಜ್ ಶರಣ್ ಮತ್ತು ಪುರವ ರಾಜಾ ಜೋಡಿ, ಈ ಪಂದ್ಯಾವಳಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ 35 ರ್ಯಾಂಕಿಂಗ್ ಅಂಕಗಳನ್ನು ಪಡೆಯಿತು. ಎಡಗೈ ಆಟಗಾರ ದಿವಿಜ್ ಪ್ರಸ್ತುತ 102ನೇ ರ್ಯಾಂಕಿಂಗ್ ಹೊಂದಿದ್ದಾರೆ.