ಬಾಬಾ ಸನ್ನಿಧಿಗೆ ಶ್ರೀಶಾಂತ್
ನವದೆಹಲಿ: 2008ರ ಸ್ಲ್ಯಾಪ್‌ಗೇಟ್ ವಿವಾದವನ್ನು ಮತ್ತೇ ಕೆದಕಿರುವ ವೇಗಿ ಶ್ರೀಶಾಂತ್, ಶನಿವಾರ ಮಹಾರಾಷ್ಟ್ರದ ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಶ್ರೀಶಾಂತ್, ಸದ್ಯ ನಾನು ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಹಿನ್ನಲೆಯಲ್ಲಿ ಈ ವಿವಾದದ ಬಗ್ಗೆ ಮತ್ತೆ ಮಾತನಾಡುವುದಿಲ್ಲ. ನಾನು ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುವ ಸಲುವಾಗಿ ಟ್ವಿಟರ್‌ನಲ್ಲಿ ಘಟನೆ ಬಗ್ಗೆ ಬರೆದುಕೊಂಡೆ. ಅಲ್ಲದೆ ಮನಃಶಾಂತಿಗಾಗಿ ನಾನು ದೇವಾಲಯಕ್ಕೆ ಭೇಟಿ ನೀಡಿರುವುದಾಗಿ ಶ್ರೀಶಾಂತ್ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಕಠಿಣ ಪರಿಶ್ರಮ ವಹಿಸುವೆ' ಎಂದರು.