ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫೋರ್ಸ್ ಇಂಡಿಯಾಗೆ 8ನೇ ಸ್ಥಾನ

Mainashree
Updated On : 14 Apr 2013, 9:42 am

ಶಾಂಘೈ: ಸಹರಾ ಫೋರ್ಸ್ ಇಂಡಿಯಾದ ತಂಡದ ಪೌಲ್ ಡಿ ರೆಸ್ತಾ ಅವರು ಶಾಂಘೈ ರೇಸ್‌ನಲ್ಲಿ 8ನೇ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಈ ಬಾರಿಯ ರೇಸ್ ಋತುವಿನಲ್ಲಿ ಮೊದಲ ಬಾರಿಗೆ ತಮ್ಮ ತಂಡಕ್ಕೆ ಅಂಕ ಗಳಿಸಿಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಈ ರೇಸ್‌ನಲ್ಲಿ ಅವರಿಗೆ 4 ಅಂಕಗಳು ಲಭ್ಯವಾಗಿವೆ. 11ನೇ ಸ್ಥಾನದಿಂದ ರೇಸ್‌ಗೆ ಇಳಿದಿದ್ದ ರೆಸ್ತಾ, ಟಾಪ್ 10ರಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು.
ಸುಟಿಲ್ ಹೊರಕ್ಕೆ: 13ನೇ ಸ್ಥಾನದಿಂದ ರೇಸ್‌ಗೆ ಇಳಿದಿದ್ದ ಆ್ಯಡ್ರಿಯನ್ ಸುಟಿಲ್ ಅವರಿಗೆ ರೇಸ್ ಪೂರ್ತಿಗೊಳಿಸಲಾಗಲಿಲ್ಲ. 4ನೇ ಲ್ಯಾಪ್‌ನಲ್ಲಿ ಸುಟಿಲ್ ಸಾಗುತ್ತಿದ್ದ ವೇಳೆ, ಹಿಂಬದಿಯಿಂದ ಬಂದ ಸೌಬರ್ ತಂಡದ ರೂಕಿ ಈಸ್ಟ್‌ಬೆನ್ ಅವರ ಕಾರು ಸುಟಿಲ್ ಕಾರಿಗೆ ಢಿಕ್ಕಿ ಹೊಡೆಯಿತು. ಇದರಿಂದ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ರೇಸ್‌ನಿಂದ ನಿವೃತ್ತಿಯಾದರು.

ವೆಬರ್‌ಗೆ ನಿರಾಸೆ
ಶಾಂಘೈ
: ಮಲೇಷ್ಯಾ ಜಿಪಿಯಲ್ಲಿ  ಮೊದಲ ಸ್ಥಾನ ತಪ್ಪಿಸಿಕೊಂಡಿದ್ದ ರೆಡ್‌ಬುಲ್ ತಂಡದ ಮತ್ತೊಬ್ಬ ಕ್ರೀಡಾಳು ಮಾರ್ಕ್ ವೆಬರ್ ಅವರಿಗೆ ಈ ಬಾರಿಯೂ ನಿರಾಸೆ ಕಾದಿತ್ತು. ಅವರ ಕಾರಿನ ಹಿಂಬದಿಯ ಟೈಯರ್ ಕೈಕೊಟ್ಟ ಹಿನ್ನೆಲೆಯಲ್ಲಿ, 53 ಲ್ಯಾಪ್‌ಗಳಲ್ಲಿ ಕೇವಲ 18 ಲ್ಯಾಪ್‌ಗಳನ್ನು ಮಾತ್ರ ವೆಬರ್ ಪೂರ್ತಿ ಮಾಡಲು ಸಾಧ್ಯವಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement