ಬಾಸ್ಕೆಟ್ಬಾಲ್ ಪಿಪಿಸಿಗೆ ಜಯ
ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನ ರಾಜ್ಯಮಟ್ಟದ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನ ಭಾನುವಾರದ ಪಂದ್ಯದಲ್ಲಿ ಪಿಪಿಸಿ ತಂಡ ಸಿಜೆಸಿ ತಂಡವನ್ನು 28- 11 ಅಂಕಗಳಿಂದ ಸೋಲಿಸಿತು. ಇನ್ನು ಪ್ರೊಟೆಕ್ ಚಾಲೆಂಜರ್ಸ್ ಮೈಸೂರ್ ತಂಡ ರಾಜ್ಕುಮಾರ್ ಬಿಸಿ ತಂಡವನ್ನು 30- 12 ಅಂಕಗಳಿಂದ ಪರಾಭವಗೊಳಿಸಿತು. ಮೂರನೇ ಪಂದ್ಯದಲ್ಲಿ ಚಿತ್ರದುರ್ಗದ ದುರ್ಗನ್ಸ್ ತಂಡ ಬಾಗಲಕೋಟೆ ತಂಡವನ್ನು 40- 6 ಭಾರೀ ಅಂತರದಿಂದ ಸೋಲಿಸಿತು.
ನಾಲ್ಕನೇ ಪಂದ್ಯದಲ್ಲಿ ಅಪ್ಪಯ್ಯ ಕ್ಲಬ್, ಕನಕ ಕೋಲಾರ ತಂಡವನ್ನು 34- 25 ಅಂಕಗಳಿಂದ ಸೋಲಿಸಿತು. ಮತ್ತೊಂದು ಪಂದ್ಯದಲ್ಲಿ ಭರತ್ ತಂಡ ಎನ್ಜಿವಿ ಕ್ಲಬ್ ವಿರುದ್ಧ 37- 35 ಅಂಕಗಳಿಂದ ಜಯ ಸಾಧಿಸಿತು.ಆರನೇ ಪಂದ್ಯದಲ್ಲಿ ವಿವೇಕ್ಸ್ ಕ್ಲಬ್ ವಿಬಿಸಿ ಮಂಡ್ಯ ತಂಡವನ್ನು 31- 15 ಅಂಕಗಳಿಂದ ಪರಾಭವಗೊಳಿಸಿತು. ಬಾಲಕಿಯರ ವಿಭಾಗದಲ್ಲಿ ಹಲಸೂರು ತಂಡ ರಾಜ್ಕುಮಾರ್ ಕ್ಲಬ್ ಅನ್ನು 40- 04 ಅಂತರದಿಂದ ಹಿಮ್ಮೆಟ್ಟಿಸಿತು. ಎರಡನೇ ಪಂದ್ಯದಲ್ಲಿ ವಿದ್ಯಾನಗರದ ಎಸ್ಪಿ ಸ್ಕೂಲ್ ತಂಡ ರೋವರ್ಸ್ ಧಾರವಾಡ ತಂಡವನ್ನು 36- 16 ಅಂಕಗಳಿಂದ ಸೋಲಿಸಿತು.
ಮೂರನೇ ಪಂದ್ಯದಲ್ಲಿ ಶಿವಮೊಗ್ಗ ಯೂತ್ಸ್ ತಂಡ ವಿವೇಕ್ಸ್ ಕ್ಲಬ್ ವಿರುದ್ಧ 25- 14 ಅಂಕಗಳ ಅಂತರದಿಂದ ವಿಜಯ ಸಾಧಿಸಿತು.