ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಾಜಸ್ಥಾನ ರಾಯಲ್ಸ್‌ಗೆ ಸುಲಭ ಜಯ

Mainashree
Updated On : 15 Apr 2013, 1:29 am

ಜೈಪುರ: ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟ್ ಮಾಡಿದ್ದ ಪಂಜಾಬ್, 18.5 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನೂ ಕಳೆದುಕೊಂಡು ಕೇವಲ 124 ರನ್ ಮಾತ್ರ ಗಳಿಸಿತ್ತು. ಈ ಸುಲಭ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ, 19.2 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 126 ರನ್ ಗಳಿಸಿ, ಜಯ ಪಡೆಯಿತು.
ಕುಸಿದ ಪಂಜಾಬ್: ಆರಂಭದಲ್ಲಿ ಮಂದೀಪ್ ಸಿಂಗ್ (2) ಮತ್ತು ಆ್ಯಡಂ ಗಿಲ್‌ಕ್ರಿಸ್ಟ್ (0) ಲಗುಬಗನೆ ಪೆವಿಲಿಯನ್ ಸೇರುವ ಮೂಲಕ ಪಂಜಾಬ್ ಆರಂಭಿಕ ಆಘಾತ ಅನುಭವಿಸಿತು. ನಂತರ ಬಂದ ಮನನ್ ವೋಹ್ರಾ (3) ಸಹ ಅರಂಭಿಕರ ಹಾದಿಯನ್ನೇ ಹಿಡಿದರು. ಆದರೆ, ಡೇವಿಡ್ ಹಸ್ಸಿ ಮಾತ್ರ ರಾಜಸ್ಥಾನ ಬೌಲರ್‌ಗಳಿಗೆ ಕೊಂಚ ಪ್ರತಿರೋಧ ಒಡ್ಡಿದರು. 31 ಎಸೆತಗಳನ್ನು ಎದುರಿಸಿದ ಹಸ್ಸಿ ಮೊತ್ತದಲ್ಲಿ 1 ಸಿಕ್ಸರ್ ಮತ್ತು 4 ಬೌಂಡರಿಗಳು ಸೇರಿದ್ದವು. ಆದರೆ, ಸಿದ್ಧಾರ್ಥ್ ತ್ರಿವೇದಿ ಬೌಲಿಂಗ್‌ನಲ್ಲಿ ರಾಹುಲ್ ದ್ರಾವಿಡ್‌ಗೆ ಕ್ಯಾಚ್ ನೀಡಿದ ಹಸ್ಸಿ ನಿರಾಸೆ ಮೂಡಿಸಿದರು.
ಹಸ್ಸಿ ನಂತರ ಗುರುಕೀರತ ಸಿಂಗ್ (10) ಮತ್ತು ಆರ್. ಸತೀಶ್ (11) ಸಹ ರಾಜಸ್ಥಾನ ಬೌಲರ್‌ಗಳನ್ನು ಎದುರಿಸಲಾಗಲಿಲ್ಲ. ನಂತರ ಬಂದ ಅಜರ್ ಮೆಹ್ಮೂದ್ (23) ಕೊಂಚ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಂತೆಯೇ ಕೆ. ಕೂಪರ್ ಬೌಲಿಂಗ್‌ನಲ್ಲಿ ಬೌಲ್ಡ್ ಆದರು. ಅಂತ್ಯದಲ್ಲಿ 7 ಎಸೆತಗಳಲ್ಲಿ 15 ರನ್ ಸಿಡಿಸಿದ ಪ್ರವೀಣ್ ಕುಮಾರ್ ತಂಡದ ಮೊತ್ತವನ್ನು 120ರ ಗಡಿ ದಾಟಿಸುವುದರೊಂದಿಗೆ ಭರವಸೆ ಮೂಡಿಸಿದ್ದರು. ಆದರೆ, ರನೌಟ್ ಆಗುವ ಮೂಲಕ ನಿರಾಸೆ ಮೂಡಿಸಿದರು.
ರಾಜಸ್ಥಾನ ರಾಯಲ್ಸ್ ತಂಡದ ಪರ ಆಕರ್ಷಕ ಬೌಲಿಂಗ್ ಪ್ರದರ್ಶಿಸಿದ ಶ್ರೀಶಾಂತ್, ಕೆ. ಕೂಪರ್, ಫಾಕ್ನರ್ ಹಾಗೂ ಸಿದ್ಧಾರ್ಥ ತ್ರಿವೇದಿ ತಲಾ ಎರಡು ವಿಕೆಟ್ ಕಬಳಿಸಿದರು.
ಉತ್ತಮ ಆರಂಭ: ಪಂದ್ಯ ಗೆಲ್ಲಲು ಕೇವಲ 26 ರನ್ ಗುರಿಯೊಂದಿಗೆ ಕ್ರೀಸ್‌ಗೆ ಇಳಿದ ರಾಜಸ್ಥಾನ ತಂಡಕ್ಕೆ ಆರಂಭಿಕರಾದ ಶೇನ್ ವ್ಯಾಟ್ಸನ್ ಹಾಗೂ ಅಜಿಂಕ್ಯ ರಹಾನೆ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 43 ರನ್ ಪೇರಿಸಿತು. ಆರಂಭದಲ್ಲಿ ಉತ್ತಮ ರನ್‌ರೇಟ್‌ನೊಂದಿಗೆ ಗುರಿಯತ್ತ ದಾಪುಗಾಲು ಹಾಕಿದ ರಾಜಸ್ಥಾನ ಆನಂತರ ತನ್ನ ರನ್‌ಗತಿಯಲ್ಲಿ ಇಳಿಕೆ ದಾಖಲಿಸಿತು. ನಿಗದಿತ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡಿದ್ದು ಇದಕ್ಕೆ ಕಾರಣ. 5ನೇ ಓವರ್‌ನಲ್ಲಿ ವ್ಯಾಟ್ಸನ್ ಔಟಾದ ಮೇಲೆ, ರಾಹುಲ್ ದ್ರಾವಿಡ್ ಹಾಗೂ ಅಜಿಂಕ್ಯ ರಹಾನೆ ಇಬ್ಬರೂ 2ನೇ ವಿಕೆಟ್‌ಗೆ ಕೇವಲ 15 ರನ್ ಸೇರಿಸಿತು. ವೈಯಕ್ತಿಕವಾಗಿ ಕೇವಲ 9 ರನ್ ಗಳಿಸಿದ ದ್ರಾವಿಡ್, 8ನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದರು. ಅವರ ನಂತರ, ಬಂದ ಸ್ಟುವರ್ಟ್ ಬಿನ್ನಿ, ಹಾಡ್ಜ್ ಅವರೂ ಹೆಚ್ಚು ಆಡದೇ ಬೇಗ ಪೆವಿಲಿಯನ್‌ಗೆ ಮರಳಿದರು. ಈ ಹಂತದಲ್ಲಿ, ರನ್‌ರೇಟ್ ಗಣನೀಯವಾಗಿ ಕುಸಿಯಿತು.
ಈ ಹಂತದಲ್ಲಿ, ಕ್ರೀಸ್‌ಗೆ ಕಾಲಿಟ್ಟ ಆರನೇ ಕ್ರಮಾಂಕದ ಸ್ಯಾಮ್ಸನ್, ಆರಂಭಿಕ ರೆಹಾನೆ ಅವರಿಗೆ ಉತ್ತಮ ಸಾಥ್ ನೀಡಿದರಲ್ಲದೇ, ತಂಡಕ್ಕೆ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಕೊನೆಯ ಓವರ್‌ನಲ್ಲಿ 6 ಎಸೆತಗಳಲ್ಲಿ 5 ರನ್ ಪೇರಿಸುವ ಅಗತ್ಯ ರಾಜಸ್ಥಾನ ತಂಡಕ್ಕೊದಗಿತ್ತು. ಈ ಓವರ್ ಮಾಡಿದ್ದ ಚಾವ್ಲಾ ಅವರ ಮೊದಲ ಎಸೆತದಲ್ಲಿ 2 ರನ್ ಗಳಿಸಿದ ಸ್ಯಾಮ್ಸನ್, ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ತಂಡಕ್ಕೆ ಜಯ ತಂದುಕೊಟ್ಟರು.
ಕಿಂಗ್ಸ್ ಇಲೆವೆನ್ ಪಂಜಾಬ್: 124 (18.5 ಓವರ್)
ಮನದೀಪ್ ಸಿಂಗ್ ಸಿ ಬಿನ್ನಿ ಬಿ ಶ್ರೀಶಾಂತ್ 2 (8), ಗಿಲ್ ಕ್ರಿಸ್ಟ್ ಸಿ ತ್ರಿವೇದಿ ಬಿ ಶ್ರೀಶಾಂತ್ 0 (2), ಮನನ್ ವೊಹ್ರಾ ರನೌಟ್ (ಫಾಕ್ನರ್) 3 (6), ಡೇವಿಡ್ ಹಸ್ಸಿ ಸಿ ದ್ರಾವಿಡ್ ಬಿ ತ್ರಿವೇದಿ 41 (31), ಗುರ್‌ಕೀರತ್ ಸಿಂಗ್ ಸಿ ಸ್ಯಾಮ್ಸನ್ ಬಿ ತ್ರಿವೇದಿ 10 (15), ಸತೀಶ್ ಸಿ ಸ್ಯಾಮ್ಸನ್ ಬಿ ಫಾಕ್ನರ್ 11 (12), ಅಜರ್ ಮೆಹಮೂದ್ ಬಿ ಕೂಪರ್ 23 (20),  ಫಿಯೂಶ್ ಚಾವ್ಲಾ ಸಿ ರಹಾನೆ ಬಿ ಕೂಪರ್ 7 (9), ರಿಯಾನ್ ಹ್ಯಾರಿಸ್ ಅಜೇಯ 2 (3), ಪ್ರವೀಣ್ ಕುಮಾರ್ ರನೌಟ್ (ಸ್ಯಾಮ್ಸನ್) 15 (7), ಪರ್ವಿಂದರ್ ಆವಾನಾ ಸಿ ಸ್ಯಾಮ್ಸನ್ ಬಿ ಫಾಕ್ನರ್ 0 (1),
ವಿಕೆಟ್ ಪತನ: 1-5, 2-8, 3-10, 4-45, 5-67, 6-75, 7-92, 8-104, 9-124, 10-124.
ಬೌಲಿಂಗ್: ಚಾಂಡಿಲಾ 3-0-14-0, ಶ್ರೀಶಾಂತ್ 4-1-20-2, ಕೂಪರ್ 3-0-33-2, ಫಾಕ್ನರ್ 3.5-0-30-2, ತ್ರಿವೇದಿ 4-0-21-2, ಸ್ಟುವರ್ಟ್ ಬಿನ್ನಿ 1-0-4-0.
ರಾಜಸ್ಥಾನ ರಾಯಲ್ಸ್: 126/4 (19.2 ಓವರ್)
ವ್ಯಾಟ್ಸನ್ ಸಿ ಮನದೀಪ್ ಬಿ ಆವಾನಾ 32 (19), ಅಜಿಂಕ್ಯ ರೆಹಾನೆ ಅಜೇಯ 34 (42), ರಾಹುಲ್ ದ್ರಾವಿಡ್ ಸಿ ಗಿಲ್‌ಕ್ರಿಸ್ಟ್ ಬಿ ಪ್ರವೀಣ್ ಕುಮಾರ್ 9 (12), ಸ್ಟುವರ್ಟ್ ಬಿನ್ನಿ ಸಿ ಗಿಲ್‌ಕ್ರಿಸ್ಟ್ ಬಿ ಪ್ರವೀಣ್ ಕುಮಾರ್ 0 (4), ಹಾಡ್ಜ್ ಎಲ್‌ಬಿಡಬ್ಲ್ಯೂ ಬಿ ಚಾವ್ಲಾ 15 (16), ಸ್ಯಾಮ್ಸನ್ ಅಜೇಯ 27 (23). ಇತರೆ 9.
ವಿಕೆಟ್ ಪತನ: 1-43, 2-58, 3-58, 4-79.
ಬೌಲಿಂಗ್: ಪ್ರವೀಣ್ ಕುಮಾರ್ 4-1-10-2, ಹ್ಯಾರಿಸ್ 4-0-30-0, ಪರ್ವಿಂದರ್ ಆವಾನಾ 4-0-35-1, ಅಜರ್ ಮಹಮೂದ್ 4-0-23-0, ಫಿಯೂಶ್ ಚಾವ್ಲಾ 3.2-0-22-1.
ಪಂದ್ಯಶ್ರೇಷ್ಠ: ಫಾಕ್ನರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement