ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ವಾರಿಯರ್ಸ್‌ಗೆ ಸೂಪರ್ ಸವಾಲು

Mainashree
Updated On : 14 Apr 2013, 10:38 am

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ನಡೆದ ಪಂದ್ಯದಲ್ಲಿ ಅದೃಷ್ಟ ಕೈ ಹಿಡಿಯುವುದರೊಂದಿಗೆ ರೋಚಕ ಜಯ ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸೋಲಿನ ಸರಮಾಲೆಯನ್ನು ಹೊತ್ತು ಸಾಗುತ್ತಿರುವ ಪುಣೆ ವಾರಿಯರ್ಸ್ ತಂಡಗಳು ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ.
ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 1ರಲ್ಲಿ ಮಾತ್ರ ಜಯ ಸಾಧಿಸಿರುವ ಪುಣೆ ವಾರಿಯರ್ಸ್ ತಂಡಕ್ಕೆ, ತವರಿನ ಅಂಗಣದಲ್ಲಿ ಜಯ ಕಾಣುವ ಚೆನ್ನೈ ವಿರುದ್ಧದ ಪಂದ್ಯ ಭಾರೀ ಸವಾಲಾಗಿ ಪರಿಣಮಿಸಿದೆ.
ಇನ್ನೊಂದೆಡೆ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ 2ರಲ್ಲಿ ಜಯ ಸಾಧಿಸಿ ವಿಶ್ವಾಸದಲ್ಲಿರುವ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಸೂಪರ್ ಕಿಂಗ್ಸ್ ಪಡೆ, ಪುಣೆ ವಿರದ್ಧ ಜಯ ಸಾಧಿಸಲು ತುದಿಗಾಲಿನಲ್ಲಿ ನಿಂತು ಕಾಯುತ್ತಿದೆ.
ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ 38 ರನ್ ಗಳಿಸುವ ಮೂಲಕ ಜಯ ತಂದುಕೊಟ್ಟ ರವಿಂದ್ರ ಜಡೇಜಾ ತಂಡದ ಪ್ರಮುಖ ಆಲ್ರೌಂಡರ್ ಆಗಿ ಮಿಂಚುತ್ತಿದ್ದಾರೆ. ಜಡೇಜಾ ಅವರೊಂದಿಗೆ, ಸುರೇಶ್ ರೈನಾ, ಎಸ್. ಬದ್ರೀನಾಥ್ ಹಾಗೂ ನಾಯಕ ಧೋನಿ ಸಹ ಬ್ಯಾಟಿಂಗ್ ವಿಭಾಗದಲ್ಲಿ ತಂಡಕ್ಕೆ ತಕ್ಕ ಕೊಡುಗೆಯನ್ನೇ ನೀಡುತ್ತಿದ್ದಾರೆ.
ಈ ಎಲ್ಲ ಬ್ಯಾಟ್ಸ್‌ಮನ್‌ಗಳು, ಪುಣೆ ವಾರಿಯರ್ಸ್ ತಂಡದ ವಿರುದ್ಧ ಗುಡುಗುವ ಸಾಧ್ಯತೆಗಳಿವೆ. ಅಲ್ಲದೆ ಬೌಲಿಂಗ್ ವಿಭಾಗದಲ್ಲಿ ಆರ್‌ಸಿಬಿ ವಿರುದ್ಧ 40 ರನ್ ನೀಡಿ 3 ವಿಕೆಟ್ ಕಬಳಿಸಿದ ಕ್ರಿಸ್ ಮೊರೀಸ್ ತಂಡದ ವಿಶ್ವಾಸವನ್ನು ಹೆಚ್ಚಿಸಿದ್ದಾರೆ. ಮೊರೀಸ್ ಅವರೊಂದಿಗೆ, ಡರ್ಕ್ ನ್ಯಾನೆಸ್, ಸ್ಥಳೀಯ ಆಟಗಾರ ಆರ್. ಅಶ್ವಿನ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಯಾವುದೇ ಹಂತದಲ್ಲಿ ತಂಡಕ್ಕೆ ನೆರವಾಗಬಲ್ಲವರಾಗಿದ್ದಾರೆ. ಇನ್ನು ಉತ್ತಮ ಆಟಗಾರರಿಂದಲೇ ಕೂಡಿರುವ ಪುಣೆ ವಾರಿಯರ್ಸ್ ತಂಡ, ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಗೆದ್ದಿರುವುದನ್ನು ಬಿಟ್ಟರೆ, ನಿರಂತರವಾಗಿ ಎಡವುತ್ತಲೇ ಸಾಗುತ್ತಿದೆ. ಟಿ20 ಸ್ಟಾರ್ ಆಟಗಾರ ರಾಬಿನ್ ಉತ್ತಪ್ಪ, ಎರೋನ್ ಫಿಂಚ್, ರಾಸ್ ಟೇಲರ್, ಯುವರಾಜ್ ಸಿಂಗ್, ಏಂಜೆಲೋ ಮ್ಯಾಥ್ಯೂವ್ಸ್ ಹಾಗೂ ಟಿ ಸುಮನ್ ಅವರಂತಹ ಬ್ಯಾಟ್ಸ್‌ಮನ್‌ಗಳು ಪುಣೆ ತಂಡದಲ್ಲಿದ್ದಾರೆ. ಆದರೆ, ಯಾವೊಬ್ಬ ಬ್ಯಾಟ್ಸ್‌ಮನ್ ಸಹ ತಂಡಕ್ಕೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತಿಲ್ಲ. ಈ ಕಾರಣಕ್ಕಾಗಿಯೇ ತಂಡ ಸೋಲಿನ ಹಾದಿಯನ್ನು ತುಳಿಯುತ್ತದೆ. ಇನ್ನು ಬೌಲಿಂಗ್ ವಿಭಾಗ ನಿಭಾಯಿಸುತ್ತಿರುವ ಭುವನೇಶ್ವರ ಕುಮಾರ್, ರಾಹುಲ್ ಶರ್ಮಾ ಹಾಗೂ ಅಶೋಕ್ ದಿಂಡಾ, ಎದುರಾಳಿ ತಂಡವನ್ನು ನಿಯಂತ್ರಿಸುವಲ್ಲಿ ವೈಫಲ್ಯ ಕಾಣುತ್ತಿದ್ದಾರೆ. ಹೀಗಾಗಿ ತವರಿನ ಅಂಗಣದಲ್ಲಿ ಬಲಿಷ್ಠ ಪ್ರದರ್ಶನ ತೋರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪುಣೆ ವಾರಿಯರ್ಸ್ ತಂಡ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದು ಕುತೂಹಲ ಉಂಟು ಮಾಡಿದೆ.

ಸಂಭಾವ್ಯ ತಂಡಗಳು
ಪುಣೆ ವಾರಿಯರ್ಸ್
ಏಕಲವ್ಯ ದ್ವಿವೇದಿ, ಉದಿತ್ ಬಿರ್ಲಾ, ಮೈಕಲ್ ಕ್ಲಾರ್ಕ್, ಅಶೋಕ್ ದಿಂಡಾ, ರೈಫಿ ಗೊಮೇಜ್, ಹರ್ಪ್ರೀತ್ ಸಿಂಗ್, ಧೀರಜ್ ಜಾದವ್, ಭುವನೇಶ್ವರ್ ಕುಮಾರ್, ಅನುಸ್ತುಪ್ ಮಜುಂಮ್ದಾರ್, ಮಿಥುನ್ ಮನಾಸ್, ಮಿಚ್ಚೆಲ್ ಮಾರ್ಷ್, ಆ್ಯಂಜಲೋ ಮ್ಯಾಥ್ಯೂಸ್, ಅಜಂತಾ ಮೆಂಡೀಸ್, ಅಲಿ ಮುರ್ತಾಜಾ, ಅಭಿಶೇಕ್ ನಾಯರ್, ಈಶ್ವರ್ ಪಾಂಡೆ, ಮನೀಶ್ ಪಾಂಡೆ, ವೇಯ್ನ್ ಪಾರ್ನೆಲ್, ಪರ್ವೆಜ್ ರಸೂಲ್, ಮಹೇಶ್ ರಾವತ್, ಕೇನ್ ರಿಚರ್ಡ್‌ಸನ್, ಮರ್ಲಾನ್ ಸ್ಯಾಮ್ಯೂಯೆಲ್ಸ್, ರಾಹುಲ್ ಶರ್ಮಾ, ಸ್ಟೀವ್ ಸ್ಮಿತ್, ಟಿ.ಸುಮನ್, ತಮಿಮ್ ಇಕ್ಬಾಲ್, ರಾಸ್ ಟೇಲರ್, ಕೃಷ್ಣಕಾಂತ್ ಉಪಾದ್ಯಾಯ್, ರಾಬಿನ್ ಉತ್ತಪ್ಪ, ಶ್ರೀಕಾಂತ್ ವಾ, ಲ್ಯೂಕು ರೈಟ್, ಯುವರಾಜ್ ಸಿಂಗ್.

ಚೆನ್ನೈ ಸೂಪರ್ ಕಿಂಗ್ಸ್
ಮಹೇಂದ್ರ ಸಿಂಗ್ ಧೋನಿ, ಶ್ರೀಕಾಂತ್ ಅನಿರುದ್ಧ, ಬಾಬಾ ಅಪರಾಜಿತ್, ಆರ್.ಅಶ್ವಿನ್, ಎಸ್.ಬದ್ರಿನಾಥ್, ಡ್ವೇನ್ ಬ್ರಾವೊ, ಅಖಿಲ ಧನಂಜಯ, ಡುಪ್ಲಿಸೆಸ್, ಜಾಸನ್ ಹೊಲ್ಡರ್, ಬೆನ್ ಹಿಲ್ಫಾನಾಸ್, ಮೈಕ್ ಹಸ್ಸಿ, ಇಮ್ತಿಯಾಜ್ ಅಹಮದ್, ರವೀಂದ್ರ ಜಡೇಜಾ, ಶಡಬ್ ಜಕಾಟಿ, ಆರ್.ಕಾರ್ತಿಕೇಯನ್, ನುವಾನ್ ಕುಲಸೇಕರ, ಬೆನ್ ಲಾಹ್ಲಿನ್, ರೋನಿತ್ ಮೋರೆ, ಆಲ್ಬಿ ಮಾರ್ಕೆಲ್, ಕ್ರಿಸ್ ಮೊರಿಸ್, ಡರ್ಕ್ ನ್ಯಾನಿಸ್, ಸುರೇಶ್ ರೈನಾ, ಅಂಕಿತ್ ರಜ್‌ಪೂತ್, ವೃದ್ಧಿಮಾನ್ ಸಾಹಾ, ವಿಜಯ್ ಶಂಕರ್, ಮೊಹಿತ್ ಶರ್ಮಾ, ಮುರಳಿ ವಿಜಯ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement