ಸಚಿನ್ ನಿವೃತ್ತಿಗೆ ಸಕಾಲ: ಸ್ಟೀವ್
ಕೊಲ್ಲಂ: ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಸಚಿನ್ ತೆಂಡೂಲ್ಕರ್ ಅವರು ನಿವೃತ್ತಿ ಘೋಷಿಸುವ ಸಮಯ ಇದೀಗ ಬಂದಿದೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವಾ ತಿಳಿಸಿದ್ದಾರೆ. ಖಾಸಗಿ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು, 'ಸಚಿನ್ ತೆಂಡೂಲ್ಕರ್ ಈಗ ಮೊದಲಿನಂತೆ ಆಡುತ್ತಿಲ್ಲ. ಹಾಗಾಗಿ, ಅವರು ತಮ್ಮ ನಿವೃತ್ತಿಯ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಕಾಲ ಬಂದಿದೆ. ಆದರೂ, ನಿವೃತ್ತಿ ಆಗಬೇಕೋ, ಬೇಡವೊ ಎನ್ನುವುದು ಅವರ ವೈಯಕ್ತಿಕ ವಿಷಯ' ಎಂದು ಹೇಳಿದರು.