'ಸರ್' ಬಿರುದು ಜೋಕ್: ಜಡೇಜಾ
ಚೆನ್ನೈ: ತಂಡದ ಆಟಗಾರರು ನನಗೆ 'ಸರ್' ಎಂಬ ಬಿರುದು ನೀಡಿರುವುದು ಒಂದು ಜೋಕ್. ಹೀಗೆ ಕರೆಯುವುದರಿಂದ ನನಗೆ ಯಾವುದೇ ತೊಂದರೆಯುಂಟಾಗದು. ಅಲ್ಲದೆ, ಈ ರೀತಿ ಜೋಕ್ ಮಾಡಿಕೊಂಡು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಭಾರತ ತಂಡದ ಸಹ ಆಟಗಾರರು ಖುಷಿಪಡುತ್ತಿದ್ದಾರೆ ಎಂದು ಜಡೇಜಾ ತಿಳಿಸಿದ್ದಾರೆ. 'ಸರ್ ಎಂಬುದು ಜೋಕ್ ಎಂದು ನನಗೆ ಅನಿಸುತ್ತದೆ ಮತ್ತು ನಾವು ಈ ರೀತಿ ಮಾತನಾಡಿಕೊಂಡು ಖುಷಿಪಡುತ್ತಿದ್ದೇವೆ. ಇದೇನು ಗಂಭೀರವಾದ ವಿಚಾರವೂ ಅಲ್ಲ. ನಾನೊಬ್ಬ ದೊಡ್ಡ ವ್ಯಕ್ತಿ ಎಂದು ನಾನು ಯಾವತ್ತೂ ಯೋಚಿಸಿಲ್ಲ. ನಾನು ಈಗ ಹೇಗಿದ್ದೇನೆ ಹಾಗೆಯೇ ನನ್ನನ್ನು ನಾನು ಒಪ್ಪಿಕೊಳ್ಳುತ್ತೇನೆ. 'ಸರ್'ಎಂಬ ನಾಮಧ್ಯೇಯದ ಬಗ್ಗೆ ನಾನು ಯಾವತ್ತೂ ಗಂಭೀರವಾಗಿ ವಿಚಾರ ಮಾಡಲೇ ಇಲ್ಲ. ಈ ಕುರಿತು ತಮಾಷೆ ಮಾಡಿಕೊಂಡು ತಂಡದಲ್ಲಿ ಪ್ರತಿಯೊಬ್ಬರೂ ಖುಷಿಪುಡುತ್ತಿದ್ದಾರಲ್ಲಾ ಅದೇ ನನಗೆ ಸಂತಸ' ಎಂದು ಅವರು ಹೇಳಿದರು.