ಸಾನಿಯಾಗೆ ಹೊಸ ಜವಾಬ್ದಾರಿ
ನವದೆಹಲಿ: ಭಾರತದ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತೀಯ ಟೆನಿಸ್ ಆಟಗಾರರ ಸಂಘ (ಐಟಿಪಿಎ)ದ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡಿದ್ದಾರೆ. ಸಾನಿಯಾ ನೇಮಕ ಕುರಿತಾಗಿ ಐಟಿಪಿಎನಿಂದ ಅಧಿಕೃತ ಪ್ರಕಟಣೆ ಭಾನುವಾರ ಹೊರಬಿದ್ದಿದೆ. ಸಂಸ್ಥೆಯ ಉಪಾಧ್ಯಕ್ಷರಾಗಿ ಸಾನಿಯಾ ನೇಮಕವಾಗುವುದರೊಂದಿಗೆ, ಐಟಿಪಿಎನಲ್ಲಿ ಉಪಾಧ್ಯಕ್ಷ ಸ್ಥಾನಗಳ ಸಂಖ್ಯೆ ನಾಲ್ಕಕ್ಕೇರಿದೆ. ಅಗ್ರ ಟೆನಿಸಿಗರಾದ ಲಿಯಾಂಡರ್ ಪೇಸ್, ಮಹೇಶ್ ಭೂಪತಿ ಹಾಗೂ ಸೋಮದೇವ್ ದೇವವರ್ಮನ್ ಅವರು ಉಳಿದ ಮೂರು ಉಪಾಧ್ಯಕ್ಷ ಸ್ಥಾನಗಳಲ್ಲಿದ್ದಾರೆ. ಡೇವಿಸ್ ಕಪ್ ಮಾಜಿ ಆಟಗಾರ ಜೈದೀಪ್ ಮುಖರ್ಜಿಯ ಅವರು ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ.