ಉಮೇಶ್ಗೆ ಕಂಕಣಬಲ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಬಿಡುವಿಲ್ಲದ ಕ್ರಿಕೆಟ್ನಲ್ಲಿ ತೊಡಗಿಕೊಂಡಿರುವ ಭಾರತ ತಂಡದ ವೇಗಿ ಉಮೇಶ್ ಯಾದವ್, ದೆಹಲಿ ಮೂಲದ ಫ್ಯಾಶನ್ ಡಿಸೈನರ್ ತಾನಿಯಾ ವಧ್ವಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಕಾರ್ಯಕ್ರಮ ಸೋಮವಾರ ನಾಗ್ಪುರದಲ್ಲಿ ನಡೆದಿದೆ.
ಡೆಲ್ಲಿ ಡೇರ್ಡೆವಿಲ್ಸ್ ತಂಡದ ಪ್ರಮುಖ ಬೌಲರ್ ಆಗಿರುವ ಉಮೇಶ್, ನಿಶ್ಚಿತಾರ್ಥದ ಹಿನ್ನೆಲೆಯಲ್ಲಿ ಒಂದು ದಿನದ ವಿಶ್ರಾಂತಿ ಪಡೆದು ಬೆಂಗಳೂರಿನಿಂದ ತವರಿಗೆ ಮರಳಿದ್ದಾರೆ.
26 ವರ್ಷದ ಯಾದವ್ ಐಪಿಎಲ್ ಮುಕ್ತಾಯವಾದ ನಂತರ ಮೇ 29ರಂದು ತಾನಿಯಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಅಡಿ ಇಡಲಿದ್ದಾರೆ.
'ನಾವು ಮೊದಲು ದೆಹಲಿಯಲ್ಲಿ ಭೇಟಿ ಮಾಡಿದೆವು. ನಂತರ ನಮ್ಮ ಸ್ನೇಹ ಬೆಳೆಯಿತು. ನಂತರ ನಾನು ಮೊದಲು ಪ್ರೀತಿಯ ಪ್ರಸ್ತಾಪ ಮಾಡಿದೆ. ಅನಂತರ ಒಂದು ವರ್ಷವಾದ ಮೇಲೆ ನಾವು ಮದುವೆಯಾಗಲು ತೀರ್ಮಾನಿಸಿದೆವು. ಇದಕ್ಕೆ ನಮ್ಮ ಕುಟುಂಬಗಳೂ ಪರಸ್ಪರ ಒಪ್ಪಿಕೊಂಡಿವೆ' ಎಂದು ನಿಶ್ಚಿತಾರ್ಥ ಕಾರ್ಯಕ್ರಮ ಮುಕ್ತಾಯವಾದ ನಂತರ ತಿಳಿಸಿದರು.