ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಏಷ್ಯನ್ ಕುಸ್ತಿಗೆ ಸುಶೀಲ್,ಯೋಗೇಶ್ವರ ಅಲಭ್ಯ

Mainashree
Updated On : 15 Apr 2013, 10:56 am

ನವದೆಹಲಿ: ಗಾಯದ ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗದ ಹಿನ್ನಲೆಯಲ್ಲಿ ಏ.18ರಿಂದ ಆರಂಭವಾಗಲಿರುವ ಏಷ್ಯನ್ ಹಿರಿಯರ ಕುಸ್ತಿ ಚಾಂಪಿಯನ್‌ಷಿಪ್‌ನಿಂದ ಭಾರತದ ಕುಸ್ತಿಪಟುಗಳಾದ ಸುಶೀಲ್ ಕುಮಾರ್ ಹಾಗೂ ಯೋಗೇಶ್ವರ ದತ್ತ್ ಹಿಂದೆ ಸರಿದಿದ್ದಾರೆ.
ಭಾರತ ತಂಡದಲ್ಲಿ ಮೀಸಲು ಆಟಗಾರರಾಗಿ ಸ್ಥಾನ ಪಡೆದಿರುವ ಅಮಿತ್ ದಿನಕರ್ ಮತ್ತು ಭಜರಂಗ್ ಅವರು ಈ ಇಬ್ಬರು ಆಟಗಾರರ ಸ್ಥಾನತುಂಬಲಿದ್ದಾರೆ.
ಸುಶೀಲ್ ಹಾಗೂ ಯೋಗೇಶ್ವರ ಕಳೆದ ತಿಂಗಳಲ್ಲಿ ನಡೆದ ಅಭ್ಯಾಸದಲ್ಲಿ ಚಾಂಪಿಯನ್‌ಷಿಪ್ ವೇಳೆಗೆ ಗುಣಮುಖರಾಗುವುದಾಗಿ ತಿಳಿಸಿದ್ದರು. ಆದರೆ ಇಬ್ಬರು ಕುಸ್ತಿಪಟುಗಳು ಇನ್ನು ಗುಣಮುಖರಾಗದೇ ತಮ್ಮ ಗಾಯದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಅವರನ್ನು ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಎಂದು ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷರಾದ ಭೂಷಣ್ ಸಿಂಗ್ ತಿಳಿಸಿದ್ದಾರೆ.
ಈ ರೀತಿಯಾದಂತಹ ಚಾಂಪಿಯನ್‌ಷಿಪ್‌ನಲ್ಲಿ ಯುವ ಆಟಗಾರರು ಭಾಗವಹಿಸುವುದರಿಂದ ಅವರ ಸಾಮರ್ಥ್ಯವನ್ನು ಪರೀಕ್ಷಿಸಲು ಸಾಧ್ಯವಾಗಲಿದೆ. ಅಲ್ಲದೆ ಯುವ ಆಟಗಾರರಿಗೆ ತವರಿನ ಪ್ರೇಕ್ಷಕರೆದುರು ಉತ್ತಮ ಪ್ರದರ್ಶನ ತೋರಲು ಅವಕಾಶ ಕಲ್ಪಿಸಿಕೊಡಲಿದೆ ಎಂದು ಅವರು ತಿಳಿಸಿದರು. ಐದು ದಿನಗಳ ಕಾಲ ನಡೆಯಲಿರುವ ಈ ಚಾಂಪಿಯನ್‌ಷಿಪ್‌ನಲ್ಲಿ 19 ದೇಶಗಳಿಂದ 225ಕ್ಕೂ ಹೆಚ್ಚು ಕುಸ್ತಿಪಟುಗಳು ಫ್ರೀಸ್ಟೈಲ್, ಗ್ರೆಕೊ ರೋಮನ್ ಹಾಗೂ ಮತ್ತು ಮಹಿಳಾ ವಿಭಾಗದಲ್ಲಿ ಭಾಗವಹಿಸುತ್ತಿದ್ದಾರೆ. ಏಷ್ಯಾದ ಪ್ರಮುಖ ದೇಶಗಳಾದ ಚೀನಾ, ಜಪಾನ್, ಕಜಕಸ್ಥಾನದ ಜತೆಗೆ ಭಾರತದ ಕುಸ್ತಿಪಟುಗಳು ಈ ಮೂರು ವಿಭಾಗದಲ್ಲಿ ಸ್ಫರ್ಧಿಸಲಿದ್ದಾರೆ. ಈ ಚಾಂಪಿಯನ್‌ಷಿಪ್‌ಗೆ ಪಾಕಿಸ್ತಾನಕ್ಕೂ ಆಹ್ವಾನವನ್ನು ನೀಡಲಾಗಿತ್ತಾದರೂ, ಪಾಕಿಸ್ತಾನದ ಕುಸ್ತಿ ಫೆಡರೇಷನ್ ತಮ್ಮ ಕುಸ್ತಿಪಟುಗಳನ್ನು ಕಳುಹಿಸಲು ನಿರಾಕರಿಸಿದೆ. ನಾವು ಪಾಕಿಸ್ತಾನದ ಕುಸ್ತಿ ಫೆಡರೇಷನ್‌ಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿತ್ತು. ಆದರೆ ಪಾಕಿಸ್ತಾನ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವುದರಿಂದ ಹಿಂದೆ ಸರಿದಿದ್ದು, ಭತ್ಯೆಯ ಕೊರತೆಯಿಂದ ಕುಸ್ತಿಪಟುಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ಕುಸ್ತಿ ಫೆಡರೇಷನ್ ಕಾರಣ ನೀಡಿದೆಎಂದು ಚಾಂಪಿಯನ್‌ಷಿಪ್‌ನ ವ್ಯವಸ್ಥಾಪಕ ಅಧ್ಯಕ್ಷ ಜಿಎಸ್ ಮಂಧೀರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement