ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಫುಟ್ಬಾಲ್: ರಂಗದಜೀದ್‌ಗೆ ಜಯ

Mainashree
Updated On : 15 Apr 2013, 10:57 am

ಕ.ಪ್ರ.ವಾರ್ತೆ  ಬೆಂಗಳೂರು  ಏ.15
ರಾಜ್ಯ ಫುಟ್ಬಾಲ್ ಅಂಗಣದಲ್ಲಿ ನಡೆಯುತ್ತಿರುವ ಐ- ಲೀಗ್ ಎರಡನೇ ಡಿವಿಷನ್ ಅಂತಿಮ ಸುತ್ತಿನ ಪಂದ್ಯಾವಳಿಯ ಸೋಮವಾರದ ಪಂದ್ಯದಲ್ಲಿ ರಂಗದಜೀದ್ ತಂಡ ಭವಾನಿಪುರೆ ತಂಡವನ್ನು 1-0 ಅಂತರದಿಂದ ಪರಾಭವಗೊಳಿಸಿತು. ರಂಗದಜೀದ್ ತಂಡದ ಪರ ಬಾಬಾತಂಡೆ ಪಂದ್ಯದ 43ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.
ಇನ್ನು ದಿನದ ಎರಡನೇ ಪಂದ್ಯದಲ್ಲಿ ಲಾಂಗ್‌ಸಿಂಗ್ ಮತ್ತು ಮೊಹ್ಮದಿಯನ್ ಸ್ಪೋರ್ಟ್ಸ್ ನಡುವೆ ನಡೆದ ಪಂದ್ಯ 1-1 ಅಂತರದಿಂದ ಡ್ರಾದಲ್ಲಿ ಅಂತ್ಯಗೊಂಡಿತು.
ಲಾಂಗ್‌ಸಿಂಗ್ ತಂಡದ ಪರ ಪಂದ್ಯದ 60ನೇ ನಿಮಿಷದಲ್ಲಿ ಜೋಯಲ್ ಸಂಡೆ ಗೋಲು ದಾಖಲಿಸಿದರೆ, ಮೊಹ್ಮದಿಯನ್ ತಂಡದ ಪರ 35ನೇ ನಿಮಿಷದಲ್ಲಿ ವಿ ಹ್ಯೂಜೂನ್ ಗೋಲು ದಾಖಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement