ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಹರೇನ್ ರೇಸ್‌ಗೆ ಬಿಗಿಭದ್ರತೆ

Mainashree
Updated On : 15 Apr 2013, 10:57 am

ಮನಾಮ: ಇತ್ತೀಚೆಗೆ ಸಂಭವಿಸಿದ ಸರಣಿ ಸ್ಫೋಟದ ಹಿನ್ನೆಲೆಯಲ್ಲಿ, ಏ. 21ರಂದು ನಡೆಯಲಿರುವ ಬಹರೇನ್ ಗ್ರ್ಯಾನ್ ಪ್ರೀ ರೇಸ್‌ಗೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ ಎಂದು ಬಹರೇನ್ ಸರ್ಕಾರ ತಿಳಿಸಿದೆ.  ಕೊಲ್ಲಿ ರಾಷ್ಟ್ರಗಳಲ್ಲೇ ವಾಣಿಜ್ಯ ಕೇಂದ್ರವೆಂದು ಹೆಸರು ಗಳಿಸಿರುವ ಬಹರೇನ್ ರೇಸ್‌ನಲ್ಲಿ ಇತ್ತೀಚೆಗೆ ಸರಣಿ ಸ್ಫೋಟ ಹಾಗೂ ಗ್ಯಾಸ್ ಸಿಲಿಂಡರ್‌ಗಳ ದಾಸ್ತಾನೂ ಸಹ ಸ್ಫೋಟಗೊಂಡಿದ್ದವು.  ಭಯೋತ್ಪಾದಕರಿಂದ ಈ ಕೃತ್ಯಗಳು ನಡೆದಿತ್ತಾದರೂ, ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಆದರೂ, ಮುನ್ನೆಚ್ಚರಿಕೆಯ ಕ್ರಮವಾಗಿ, ಬಹರೇನ್ ರೇಸ್‌ಗೆ ಬಿಗಿ ಭದ್ರತೆಯನ್ನು ಒದಗಿಸುವುದಾಗಿ ಬಹರೇನ್ ಸರ್ಕಾರ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement