ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ರಕ್ತಮಯವಾದ ಮ್ಯಾರಥಾನ್

Mainashree
Updated On : 16 Apr 2013, 1:47 am

ಬೋಸ್ಟನ್: ನಗರದಲ್ಲಿ ಏರ್ಪಡಿಸಲಾಗಿದ್ದ ಮ್ಯಾರಥಾನ್ ಸ್ಪರ್ಧೆಯಲ್ಲಿ ಸಂಭವಿಸಿದ ಅವಳಿ ಬಾಂಬ್ ಸ್ಫೋಟದಿಂದಾಗಿ ಮೂವರು ಮ್ಯಾರಥಾನ್ ಸ್ಪರ್ಧಾಳುಗಳು ಸಾವನ್ನಪ್ಪಿದ್ದು, ಇತರೆ ಸ್ಪರ್ಧಾಳುಗಳು ಹಾಗೂ ಜನರು ಸೇರಿದಂತೆ ಸುಮಾರು 60 ಜನ ಗಾಯಗೊಂಡಿದ್ದಾರೆಂದು ಮೂಲಗಳು ಹೇಳಿವೆ.
ಏನಾಯ್ತು:  ಸೋಮವಾರ ಏರ್ಪಡಿಸಲಾಗಿದ್ದ ಮ್ಯಾರಥಾನ್ ಓಟದ ಫಿನಿಶಿಂಗ್ ಲೈನ್ ಅನ್ನು ಬೋಸ್ಟನ್‌ನಲ್ಲಿನ ಬಾಯ್ಲ್‌ಸ್ಟನ್ ರಸ್ತೆಯ ಉತ್ತರ ಭಾಗದ ತುದಿಯಲ್ಲಿ ನಿಗದಿಪಡಿಸಲಾಗಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ, ಮ್ಯಾರಥಾನ್ ಪ್ರಾರಂಭವಾದ ನಂತರ, ಸ್ಪರ್ಧಾಳುಗಳು ಫಿನಿಶಿಂಗ್ ಲೈನ್ ಹತ್ತಿರ ಬರುತ್ತಿದ್ದಂತೇ ಮೊದಲ ಬಾಂಬ್ ಸ್ಫೋಟಗೊಂಡಿದೆ. ಫಿನಿಂಶಿಂಗ್ ಲೈನ್ ಬಳಿಗೆ ಬಂದಿದ್ದ ಸ್ಪರ್ಧಾಳುಗಳಲ್ಲಿ ಮೂವರು ಬಲಿಯಾಗಿದ್ದಾರೆ. ಸುತ್ತಲಿದ್ದ ಜನರೂ ಇದರಿಂದ ಗಾಯಗೊಂಡಿದ್ದಾರೆ.
ಮೊದಲ ಸ್ಫೋಟವಾದ 5 ಸೆಕೆಂಡ್‌ಗಳಲ್ಲೇ ಎರಡನೇ ಸ್ಫೋಟವೂ ಫಿನಿಶಿಂಗ್ ಲೈನ್ ಬಳಿಯೇ ಉಂಟಾಗಿದ್ದರಿಂದ ಪರಿಸ್ಥಿತಿ ಮತ್ತಷ್ಟು ಭೀಕರತೆಯನ್ನು ಪಡೆದಿದೆ.
ಘಟನೆಯಲ್ಲಿ ಸುಮಾರು 60 ಜನರಾದರೂ ಗಾಯಗೊಂಡಿರಬಹುದು ಎಂದು ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement