ಶೀಘ್ರದಲ್ಲೇ ಧವನ್ ಕಣಕ್ಕೆ
ನವದೆಹಲಿ: ಕೈಬೆರಳಿನ ಗಾಯದ ಸಮಸ್ಯೆಯಿಂದಾಗಿ ಐಪಿಎಲ್‌ನ ಮೊದಲೆರಡು ವಾರಗಳ ಕಾಲ ತಂಡದಿಂದ ಹೊರಗುಳಿದಿರುವ ಶಿಖರ್ ಧವನ್ ಆದಷ್ಟು ಬೇಗ ಗುಣಮುಖರಾಗಿ ಮತ್ತೇ ಕಣಕ್ಕಿಳಿಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಅನುಮತಿಗಾಗಿ ಕಾಯುತ್ತಿರುವ ಧವನ್ ಆದಷ್ಟು ಬೇಗ ಕಣಕ್ಕಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಧವನ್ ಆಗಮನವನ್ನು ನಿರೀಕ್ಷಿಸುತ್ತಿರುವ ಸನ್‌ರೈಸರ್ಸ್ ತಂಡದ ಕೋಚ್ ಟಾಮ್ ಮೋಡಿ, ಧವನ್ ಮುಂದಿನ 10 ದಿನಗಳ ಒಳಗೆ ಗುಣಮುಖರಾಗುವ ವಿಶ್ವಾಸವಿದೆ ಎಂದು ತಮ್ಮ ಟ್ವಿಟರ್‌ನಲ್ಲಿ ಟ್ವಿಟ್ ಮಾಡಿದ್ದಾರೆ.