ಸ್ಕಾಟ್ಗೆ ಮಾಸ್ಟರ್ಸ್ ಗಾಲ್ಫ್
ಆಗಸ್ಟಾ: ಆಸ್ಟ್ರೇಲಿಯಾದ ಗಾಲ್ಫ್ ಆಟಗಾರ ಆ್ಯಡಮ್ ಸ್ಕಾಟ್ ಅವರು 77ನೇ ಮಾಸ್ಟರ್ಸ್ ಗಾಲ್ಫ್ ಚಾಂಪಿಯನ್ಷಿಪ್ ಅನ್ನು ಮಂಗಳವಾರ ಗೆದ್ದುಕೊಂಡರು.
ಅಂತಿಮ ಸುತ್ತಿನ ಹಣಾಹಣಿಯಲ್ಲಿ ಅರ್ಜೆಂಟೈನಾದ ಏಂಜೆಲ್ ಕೆನ್ಬೆರ್ರಾ ಅವರನ್ನು ಸೋಲಿಸುವಲ್ಲಿ ಯಶಸ್ವಿಯಾದ ಅವರು, ಪ್ರಶಸ್ತಿಗೆ ಭಾಜನರಾದರಲ್ಲದೇ, ಈ ಪ್ರಶಸ್ತಿ ಗೆದ್ದ ಮೊಟ್ಟ ಮೊದಲ ಆಸ್ಟ್ರೇಲಿಯಾ ಆಟಗಾರರೆಂಬ ಹೆಗ್ಗಳಿಕೆಗೂ ಅಡಿಲೇಡ್ನ ಈ ಆಟಗಾರ ಪಾತ್ರರಾದರು.
ಪ್ರಶಸ್ತಿ ಪಡೆದ ನಂತರ ಮಾತನಾಡಿದ ಸ್ಕಾಟ್, 'ಕಳೆದೆರಡು ವರ್ಷಗಳಿಂದ ದೊಡ್ಡ ಪಂದ್ಯಾವಳಿಯೊಂದನ್ನು ಗೆಲ್ಲಬೇಕೆಂಬ ನನ್ನ ಕನಸು ಈಗ ನನಸಾಗಿದೆ. ಮಾಸ್ಟರ್ಸ್ ಪ್ರಶಸ್ತಿ ಗಳಿಸಿದ್ದಕ್ಕಾಗಿ ಖುಷಿಯಾಗುತ್ತಿದೆ' ಎಂದರು.
ಒಟ್ಟು 284 ಅಂಕ ಗಳಿಸಿದ ಸ್ಕಾಟ್, ಪ್ರಶಸ್ತಿಯೊಂದಿಗೆ 31,968 ಡಾಲರ್ ಮೊತ್ತದ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಕಾಟ್ ಸಂಕ್ಷಿಪ್ತ ಪರಿಚಯ
ಪೂರ್ತಿ ಹೆಸರು:
ಆ್ಯಡಮ್ ಡೆರೆಕ್ ಸ್ಕಾರ್ಟ್
ವಯಸ್ಸು: 32
ರಾಷ್ಟ್ರೀಯತೆ: ಆಸ್ಟ್ರೇಲಿಯಾ
ಗೆದ್ದ ಪ್ರಮುಖ ಪಂದ್ಯಾವಳಿಗಳು:
ಮಾಸ್ಟರ್ಸ್ ಓಪನ್- 2013
ಯುಎಸ್ ಓಪನ್ - 2012 (ಟಿ15)
ದಿ ಓಪನ್ ಚಾಂಪಿಯನ್ಷಿಪ್- 2012
ಪಿಜಿಎ ಚಾಂಪಿಯನ್ಷಿಪ್ - 2006