ಐ-ಲೀಗ್: ಸದರ್ನ್ ಸಮಿತಿಗೆ ಜಯ
ಬೆಂಗಳೂರು: ರಾಜ್ಯ ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐ ಲೀಗ್ ಎರಡನೇ ಡಿವಿಷನ್ ಅಂತಿಮ ಸುತ್ತಿನ ಎರಡನೇ ಹಂತದ ಮಂಗಳವಾರದ ಪಂದ್ಯದಲ್ಲಿ ಸದರ್ನ್ ಸಮಿತಿ ತಂಡವು ಮುಂಬೈ ಟೈಗರ್ಸ್ ತಂಡವನ್ನು 2-1ಗೋಲುಗಳ ಅಂತರದಲ್ಲಿ ಮಣಿಸಿದ್ದಾರೆ.
ಪಂದ್ಯದಲ್ಲಿ ಮುಂಬೈ ಟೈಗರ್ಸ್ ತಂಡ ಮೊದಲ ಗೋಲು ದಾಖಲಿಸಿತು. ಮುಂಬೈ ತಂಡದ ಪರ ಸುನಿಲ್ ಕುಮಾರ್ 28ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.
ನಂತರ ಸದರ್ನ್ ಸಮಿತಿ ತಂಡ ಎರಡು ನಿಮಿಷದಲ್ಲಿ ಮರು ದಾಳಿ ನಡೆಸಿತು. 30ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಫ್ರಾನ್ಸಿಸ್ ಒನ್ಯೆಮಾ ಗೋಲುಗಳ ಅಂತರವನ್ನು ಸಮಗೊಳಿಸಿದರು.
ನಂತರ ಪಂದ್ಯದ ದ್ವಿತಿಯಾರ್ಧದಲ್ಲಿ 65ನೇ ನಿಮಿಷದಲ್ಲಿ ಮತ್ತೆ ಗೋಲು ದಾಖಲಿಸಿದ ಫ್ರಾನ್ಸಿಸ್ ತಂಡಕ್ಕೆ ಮುನ್ನಡೆ ತಂದುಕೊಟ್ಟರು.