ಕಿಂಗ್ಸ್ ಮುಂದೆ ಮುಗ್ಗರಿಸಿದ ನೈಟ್ ರೈಡರ್ಸ್
ಮೊಹಾಲಿ: ಸಂಘಟಿತ ಹೋರಾಟ ನಡೆಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮಂಗಳವಾರ ನಡೆದ
ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ರನ್ಗಳ ಜಯ ಗಳಿಸಿದ್ದು, ಈ ಮೂಲಕ ಪಂದ್ಯಾವಳಿಯಲ್ಲಿ 2ನೇ ಜಯ ದಾಖಲಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 157 ರನ್ಗಳಿತು.
ಅಂತಿಮ ಓವರ್ಗಳಲ್ಲಿ ಕ್ರೀಸ್ಗೆ ಬಂದ ಮನ್ಪ್ರೀತ್ ಗೋನಿ 18 ಎಸೆತಗಳಲ್ಲಿ 42 ರನ್ಗಳಿಸಿದರು. ಸ್ಫೋಟಕ ಬ್ಯಾಟಿಂಗ್ಗೆ ಮುಂದಾದ ಇವರು 4 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ತಂಡದ ಮೊತ್ತ 150ರ ಗಡಿ ದಾಟಲು ನೆರವಾದರು.
ಮೊದಲ ಹ್ಯಾಟ್ರಿಕ್: ಕೆಕೆಆರ್ನ ಪ್ರಮುಖ ಬೌಲರ್ ಎನಿಸಿರುವ ಸುನಿಲ್ ನಾರಾಯಣ್ ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದು, ಈ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್ ಸಂಪಾದಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇನಿಂಗ್ಸ್ನ 15ನೇ ಓವರ್ ಮಾಡಿದ ನಾರಾಯಣ್, ಡೇವಿಡ್ ಹಸ್ಸಿ, ಅಜರ್ ಮಹಮದ್ ಹಾಗೂ ಗುರುಕೀರ್ತ್ ಅವರ ವಿಕೆಟ್ ಪಡೆದು ಈ ಸಾಧನೆ ಮಾಡಿದರು.
ಪಂಜಾಬ್ ನೀಡಿದ ಮೊತ್ತವನ್ನು ಬೆನ್ನಟ್ಟಿದ ಕೆಕೆಆರ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 153 ರನ್ ಕಲೆಹಾಕಿತು. ಕೆಕೆಆರ್ ತಂಡದ ಪರ ಗಂಭೀರ್ 60 ಹಾಗೂ ಮಾರ್ಗನ್ 47 ರನ್ಗಳಿಸಿದರಾದರೂ ತಂಡವನ್ನು ಗೆಲುವಿನ ದಡಕ್ಕೆ ಸೇರಿಸಲು ಸಾಧ್ಯವಾಗಲಿಲ್ಲ.
ಕಿಂಗ್ಸ್ ಇಲೆವೆನ್ ಪಂಜಾಬ್ 157/9 (20 ಓವರ್); ಗಿಲ್ಕ್ರಿಸ್ಟ್ ಎಲ್ಬಿಡಬ್ಲ್ಯೂ ಬಿ ಸೇನಾನಾಯಕೆ 7 (12), ಮನ್ದೀಪ್ ಸಿಂಗ್ ಸಿ ಬಿಸ್ಲಾ ಬಿ ಕಾಲಿಸ್ 41 (30), ವೊಹ್ರಾ ಸಿ ಮತ್ತು ಬಿ ಬಾಲಾಜಿ 17 (16), ಹಸ್ಸಿ ಸಿ ಬಿಸ್ಲಾ ಬಿ ನಾರಾಯಣ್ 12 (15), ಮಿಲ್ಲರ್ ಬಿ ಸೇನಾನಾಯಕೆ 20 (17), ಅಜರ್ ಸಿ ಮತ್ತು ಬಿ ನಾರಾಯಣ್ 0 (1), ಗುರ್ಕೀರ್ತ್ ಸಿಂಗ್ ಬಿ ನಾರಾಯಣ್ 0 (1), ಗೋನಿ ಬಿ ಕಾಲಿಸ್ 42 (18), ಚಾವ್ಲಾ ಅಜೇಯ 11 (8), ಪ್ರವಿಣ್ ಸಿ ಪಠಾಣ್ ಬಿ ಕಾಲಿಸ್ 1 (2), ಅವಾನ ಅಜೇಯ 0(0), ಇತರೆ 6.
ವಿಕೆಟ್ ಪತನ: 1-24, 2-61, 3-70, 4-99, 5-99, 6-99, 7-10, 8-150, 9-152; ಬೌಲಿಂಗ್: ಬಾಲಾಜಿ 4-0-39-1, ಕಾಲಿಸ್ 4-0-24-3, ಸೇನಾನಾಯಕೆ 4-0-28-2, ನಾರಾಯಣ್ 4-0-33-3, ಭಾಟಿಯಾ 4-0-30-0
ಕೋಲ್ಕತಾ ನೈಟ್ ರೈಡರ್ಸ್ 153/9 (20 ಓವರ್); ಬಿಸ್ಲಾ ಸಿ ಗಿಲ್ಕ್ರಿಸ್ಟ್ ಬಿ ಪ್ರವಿಣ್ 0 (1), ಗಂಭೀರ್ ಸಿ ಗಿಲ್ಕ್ರಿಸ್ಟ್ ಬಿ ಗೋನಿ 60 (39), ಕಾಲಿಸ್ ಸಿ ಮನ್ದೀಪ್ ಬಿ ಅಜರ್ 1 (6), ಮಾರ್ಗನ್ ಸಿ ಹಸ್ಸಿ ಬಿ ಅಜರ್ 47 (38), ತಿವಾರಿ ಬಿ ಅವಾನ 1 (7), ಪಠಾಣ್ ಸಿ ಮಿಲ್ಲರ್ ಬಿ ಪ್ರವಿಣ್ 13 (16), ದಾಸ್ ಎಲ್ಬಿಡಬ್ಲ್ಯೂ ಬಿ ಅಜರ್ 1 (3), ಭಾಟಿಯಾ ಬಿ ಅವಾನ 16 (6), ಸೇನಾನಾಯಕೆ ರನೌಟ್ (ಗಿಲ್ಕ್ರಿಸ್ಟ್/ ಪ್ರವಿಣ್) 1 (2), ನಾರಾಯಣ್ ಅಜೇಯ 1 (2), ಬಾಲಾಜಿ ಅಜೇಯ 0 (0). ಇತರೆ 12; ವಿಕೆಟ್ ಪತನ: 1-0, 2-1, 3-106, 4-116, 5-117, 6-124, 7-147, 8-150, 9-152
ಬೌಲಿಂಗ್: ಪ್ರವಿಣ್ 4-0-26-2, ಅಜರ್ 4-0-21-3, ಗೋನಿ 4-0-18-1, ಹಸ್ಸಿ 1-0-14-0, ಅವಾನ 4-0-39-2, ಚಾವ್ಲಾ 3-0-28-0