ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಪೀಟರ್ಸನ್ ಅಲಭ್ಯತೆ ದುಬಾರಿ

Vishwanath S
Updated On : 16 Apr 2013, 11:00 am

ನವದೆಹಲಿ: ಪ್ರಸಕ್ತ ಐಪಿಎಲ್‌ನಲ್ಲಿ ಹಲವಾರು ವಿದೇಶಿ ಆಟಗಾರರು ವಿವಿಧ ತಂಡಗಳಿಗಳಲ್ಲಿ ಭಾಗವಹಿಸಬೇಕಿದ್ದ ವಿದೇಶಿ ಆಟಗಾರರು ಅಲಭ್ಯರಾಗಿದ್ದು, ಈ ವಿದೇಶಿ ಆಟಗಾರರಲ್ಲಿ ಇಂಗ್ಲೆಂಡ್‌ನ ಕೆವಿನ್ ಪೀಟಸರ್ನ್‌ಅಲಭ್ಯತೆ ಹೆಚ್ಚು ದುಬಾರಿಯಾಗಿದೆ.
ನೈಕಿ ಕಂಪನಿ ನಡೆಸಿದ ಸಮೀಕ್ಷೆ ಪ್ರಕಾರ ಪೀಟರ್ಸನ್ ಅಲಭ್ಯತೆ ಪಂದ್ಯಾವಳಿಯಲ್ಲಿ ಡೆಲ್ಲಿ ತಂಡಕ್ಕೆ ಹೆಚ್ಚು ದುಬಾರಿಯಾಗಿ ಪರಿಣಮಿಸಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಒಟ್ಟು 3096 ಮತಗಳಲ್ಲಿ ಪೀಟರ್ಸನ್ ಅಲಭ್ಯತೆ ಬಗ್ಗೆ 2208 ಮತಗಳು ಬಂದಿದ್ದು. ಒಟ್ಟು ಶೇ.71.32 ರಷ್ಟು ಮಂದಿ ಪೀಟರ್ಸನ್ ಅಲಭ್ಯತೆ ಹೆಚ್ಚು ದುಬಾರಿ ಎಂದು ತಿಳಿಸಿದ್ದಾರೆ.

ಆಸ್ಕರ್ ಚಿತ್ರಗಳಿದ್ದ ಸೆಲ್‌ಫೋನ್ ವಶ
ದಕ್ಷಿಣ ಆಫ್ರಿಕಾ: ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಅವರ ಭಾವಚಿತ್ರಗಳನ್ನು ನಿಬಂಧನೆಗಳನ್ನು ಉಲ್ಲಂಘಿಸಿ ತೆಗೆದ ಹಿನ್ನೆಲೆಯಲ್ಲಿ 49 ಸೆಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲಾ ಫೋನ್‌ಗಳೂ ಪೊಲೀಸ್ ಅಧಿಕಾರಿಗಳದ್ದಾಗಿವೆ ಎಂದು ಮೂಲಗಳು ತಿಳಿಸಿವೆ.
ಪ್ರೇಯಸಿ ಹತ್ಯೆ ಆರೋಪದಡಿ ಪಿಸ್ಟೋರಿಯಸ್ ಬಂಧನವಾಗಿ, ವಿಚಾರಣೆ ನಡೆಸುವಾಗ ಹಾಗೂ ಅವರನ್ನು ಪೊಲೀಸ್ ಠಾಣೆಯಿಂದ ಕೋರ್ಟ್‌ಗೆ ಕೊಂಡೊಯ್ಯುವಾಗ ಫೋಟೊಗಳನ್ನು ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಒಟ್ಟು 49 ಸೆಲ್‌ಫೋನ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಕ್ಷಿಣ ಆಫ್ರಿಕಾದ ಹಿರಿಯ ಪೊಲೀಸರು, ಸಮಾಜದಲ್ಲಿ ಜನಪ್ರಿಯತೆಗಳಿಸಿರುವ ವ್ಯಕ್ತಿ ಕೊಲೆಯ ಆರೋಪದಡಿ ಬಂಧನಕ್ಕೆ ಒಳಗಾದಾಗ ಅವರ ಫೋಟೊಗಳನ್ನು ತೆಗೆದ ಹಿನ್ನಲೆಯಲ್ಲಿ ಈ ಕ್ರಮವನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement