ಭಾರತೀಯ ಬಾಕ್ಸರ್‌ಗಳ ಶುಭಾರಂಭ
ನವದೆಹಲಿ: ಕಜಕಿಸ್ತಾನದ ಶಿಮ್ಕೆಂಟ್‌ನಲ್ಲಿ ಮಂಗಳವಾರ ಆರಂಭಗೊಂಡ ಎಎಸ್‌ಬಿಸಿ ಏಷ್ಯನ್ ಕಾಂನ್ಫಿಡರೇಷನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಬಾಕ್ಸರ್‌ಗಳು ಗೆಲವಿನ ಶುಭಾರಂಭ ಮಾಡಿದ್ದಾರೆ.
66 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ ಭಾರತದ ಪ್ರಯಾಗ್ ಚೌಹಾನ್ ಹಾಗೂ ಆದಿತ್ಯ ಮಾನ್ ಅವರು ತಾವು ಸ್ಪರ್ಧಿಸಿದ್ದ ಪಂದ್ಯಗಳಲ್ಲಿ ವಿಜಯಿಯಾಗಿ, ಪದಕದ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಏತನ್ಮಧ್ಯೆ, ಪಂದ್ಯಾವಳಿಯಲ್ಲಿ ಲೈಟ್‌ವೇಯ್ಟ್ ವಿಭಾಗದ ಸೆಮಿಫೈನಲ್‌ಗೆ ಬೈ- ಮೂಲಕ ನೇರ ಪ್ರವೇಶ ಪಡೆದಿರುವ ಭಾರತದ ಪ್ರದೀಪ್ ಅವರೂ ಕಂಚಿನ ಪದಕವನ್ನಾದರೂ ಗೆಲ್ಲುವ ಭರವಸೆ ಮೂಡಿಸಿದ್ದಾರೆ.