ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿಂಗ್ಸ್‌ಗೆ ರೈಸರ್ಸ್ ಬೌಲಿಂಗ್ ಭೀತಿ

Vishwanath S
Updated On : 19 Apr 2013, 12:09 pm

ಹೈದರಾಬಾದ್: ತನ್ನ ಬೌಲಿಂಗ್ ಶಕ್ತಿಯ ಮೇಲೆ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯ ಸಾಧಿಸಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಊಹಿಸಲಾಗದ ಫಲಿತಾಂಶ ಕಾಣುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಶುಕ್ರವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪರಸ್ಪರ ಸೆಣೆಸಲಿವೆ.    ದಕ್ಷಿಣ ಆಫ್ರಿಕಾದ ಮಾರಕ ಬೌಲರ್ ಡೇಲ್ ಸ್ಟೇಯ್ನ್, ಇಶಾಂತ್ ಶರ್ಮಾ, ತಿಸರಾ ಪೆರೇರಾ ಹಾಗೂ ಸ್ಪಿನ್ನರ್ ಅಮಿತ್ ಮಿಶ್ರಾ ಅವರನ್ನೊಳಗೊಂಡಿರುವ ಬೌಲಿಂಗ್ ಪಡೆ ಸನ್‌ರೈಸರ್ಸ್ ತಂಡದ ಪ್ರಮುಖ ಶಕ್ತಿಯಾಗಿದೆ. ಇದುವರೆಗೂ ಸನ್‌ರೈಸರ್ಸ್ ಗೆದ್ದಿರುವ ಪಂದ್ಯಗಳಲ್ಲಿ ಈ ಬೌಲರ್‌ಗಳೇ ಮಹತ್ವದ ಪಾತ್ರ ವಹಿಸಿದ್ದಾರೆ.ಪುಣೆ ವಾರಿಯರ್ಸ್ ಬುಧವಾರ ನಡೆದ ಪಂದ್ಯದಲ್ಲಿ ಕೇವಲ 119 ರನ್‌ಗಳ ಸಧಾರಣ ಮೊತ್ತ ಕಲೆ ಹಾಕಿದ್ದ ಸನ್‌ರೈಸರ್ಸ್, ನಂತರ ಮಾರಕ ಬೌಲಿಂಗ್ ಪ್ರದರ್ಶಿಸುವ ಮೂಲಕ ಕೇವಲ 19 ಓವರ್‌ಗಳಲ್ಲಿ 108 ರನ್‌ಗಳಿಗೆ ಪುಣೆ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿತ್ತು. ಕೇವಲ 19 ರನ್ ನೀಡಿ ಹ್ಯಾಟ್ರಿಕ್ ಸೇರಿದಂತೆ 4 ವಿಕೆಟ್ ಕಬಳಿಸಿದ್ದ ಅಮಿತ್ ಮಿಶ್ರಾ, ತಂಡ ಜಯ ಸಾಧಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.ಆದರೆ, ಬ್ಯಾಟಿಂಗ್ ವೈಫಲ್ಯ ಹೈದರಾಬಾದ್ ತಂಡದಕ್ಕೆ ಪ್ರಮುಖ ಆತಂಕವಾಗಿ ಕಾಡುತ್ತಿದೆ. ನಾಯಕ ಕುಮಾರ ಸಂಗಕ್ಕಾರ ಇದುವರೆಗೂ ಲಯ ಕಂಡಕೊಂಡಿಲ್ಲ. ಆಸ್ಟ್ರೇಲಿಯಾದ ಕೆಮರೂನ್ ವೈಟ್ ಮಾತ್ರ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಆಶ್ರಯವಾಗಿದ್ದಾರೆ.ಇನ್ನೊಂದೆಡೆ ಕಳೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ 4 ರನ್‌ಗಳ ಅಂತರದಿಂದ ಜಯ ಸಾಧಿಸುವಲ್ಲಿ ಯಶಸ್ವಿಯಾಗಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ಸಹ ತನ್ನ ವಿಶ್ವಾಸವನ್ನು ವೃದ್ಧಿಸಿಕೊಂಡಿದೆ. ಕೋಲ್ಕತಾ ವಿರುದ್ಧ ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯವನ್ನಾಡಿದ ಮನ್‌ಪ್ರೀತ್ ಗೋನಿ ಪಂಜಾಬ್‌ಗೆ ಜಯ ತಂದುಕೊಡುವಲ್ಲಿ ಮಹತ್ವದ ಪಾತ್ರವಹಿಸಿದ್ದರು. 18 ಎಸೆತಗಳಲ್ಲಿ 42 ರನ್ ಪೇರಿಸಿದ್ದ ಗೋನಿ ನೈಟ್ ರೈಡರ್ಸ್ ಬೌಲರ್‌ಗಳನ್ನು ಸಮರ್ಥವಾಗಿ ದಂಡಿಸಿದ್ದರು.
ಇದುವರೆಗೂ ಆಡಿರುವ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಜಯ ಸಾಧಿಸಿರುವ ಆ್ಯಡಂ ಗಿಲ್‌ಕ್ರಿಸ್ಟ್ ನಾಯಕತ್ವದ ಕಿಂಗ್ಸ್ ಇಲೆವೆನ್ ತಂಡ ಸನ್‌ರೈಸರ್ಸ್ ವಿರುದ್ಧ ಗೆಲ್ಲುವ ಕಾತರದಲ್ಲಿದೆ. ಆದರೆ, ಸನ್‌ರೈಸರ್ಸ್ ಬಲಿಷ್ಠ ಬೌಲಿಂಗ್ ಅದಕ್ಕೆ ಆತಂಕವಾಗಿ ಪರಿಣಮಿಸಿದೆ.
ನಾಯಕ ಗಿಲ್‌ಕ್ರಿಸ್ಟ್ ಬ್ಯಾಟಿಂಗ್ ವೈಫಲ್ಯ ಕಾಣುತ್ತಿರುವ ಹಿನ್ನೆಲೆಯಲ್ಲಿ, ಕಿಂಗ್ಸ್ ಪಡೆ ಬ್ಯಾಟಿಂಗ್‌ನಲ್ಲಿ ಡೇವಿಡ್ ಹಸ್ಸಿ, ಮಂದೀಪ್ ಸಿಂಗ್, ಮನನ್ ವೋಹ್ರಾ, ಡೇವಿಡ್ ಹಾಗೂ ಗುರುಕೀರತ್ ಸಿಂಗ್ ಮೇಲೆ ಅವಲಂಬಿತವಾಗಿದೆ.
ಇನ್ನು ವೇಗಿ ಪ್ರವೀಣ್ ಕುಮಾರ್ ನಾಯಕತ್ವದ ಕಿಂಗ್ಸ್ ಬೌಲಿಂಗ್ ವಿಭಾಗದಲ್ಲಿ ರೆಯಾನ್ ಹ್ಯಾರೀಸ್, ಅಜರ್ ಮೆಹ್ಮೂದ್ ಹಾಗೂ ಪರ್ವಿಂದರ್ ಅವಾನಾ ತಂಡಕ್ಕೆ ಆಶ್ರಯವಾಗಿದ್ದಾರೆ. ಆದರೆ ಸ್ಪಿನ್ನರ್ ಪಿಯುಶ್ ಚಾವ್ಲಾ ಇದುವರೆಗೂ ಸಮರ್ಥ ಬೌಲಿಂಗ್ ಪ್ರದರ್ಶಿಸಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement